ಬೆಸ್ಕಾಂ ನೌಕರನ ದುರ್ನಡತೆ ಸಂವಿಧಾನದ ಅಸ್ಮಿತೆಗೆ ಧಕ್ಕೆ; ನ್ಯಾಯ ಸಿಗದಿದ್ದರೆ ಉಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ಮುಳಬಾಗಿಲು ನಾಗರಿಕ ವೇದಿಕೆ ಅಧ್ಯಕ್ಷ ಎಚ್ಚರಿಕೆ; ಸಂವಿಧಾನದ ವಿಧಿ 226ರ ಮಹತ್ವ ತಿಳಿಸಿದರು
ಬೆಸ್ಕಾಂ ನೌಕರನ ದುರ್ನಡತೆ ಸಂವಿಧಾನದ ಅಸ್ಮಿತೆಗೆ ಧಕ್ಕೆ; ನ್ಯಾಯ ಸಿಗದಿದ್ದರೆ ಉಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ಮುಳಬಾಗಿಲು ನಾಗರಿಕ ವೇದಿಕೆ ಅಧ್ಯಕ್ಷ ಎಚ್ಚರಿಕೆ; ಸಂವಿಧಾನದ ವಿಧಿ 226ರ ಮಹತ್ವ ತಿಳಿಸಿದರು. ತಮ್ಮ ಸಂಘಟನೆಯು ಅಧಿಕೃತವಾಗಿ "ಮುಳಬಾಗಿಲು ತಾಲೂಕು ನಾಗರಿಕ ವೇದಿಕೆಯ ಸಂವಿಧಾನ"ವನ್ನು ಒಂದು ವರ್ಷದ ಹಿಂದೆಯೇ ಅನುಮೋದಿಸಿದ್ದು, ಅದರ ದಾಖಲಾತಿಗಳು ತಮ್ಮ ಬಳಿ ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ. ಈ ಸಂವಿಧಾನದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ (https://mulbagal.org) ಮೊದಲೇ ಲಗತ್ತಿಸಲಾಗಿದ್ದು, ಸಾರ್ವಜನಿಕರು ಅದನ್ನು ಪರಿಶೀಲಿಸಬಹುದಾಗಿದೆ
NATIONALMULBAGALSTATENEWS
Rohan kumar K
4/20/20251 min read


ಮುಳಬಾಗಿಲು, ಏಪ್ರಿಲ್ 20: ಮೊನ್ನೆ ನಡೆದ ಬೆಸ್ಕಾಂ ನೌಕರ ಶ್ರೀ ಅಂಜಪ್ಪ ಅವರ ದುರ್ನಡತೆಯಿಂದ ಭಾರತ ದೇಶದ ಸಂವಿಧಾನದ ಅಸ್ಮಿತೆಗೆ ಧಕ್ಕೆಯಾಗಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ಮುಳಬಾಗಿಲು ತಾಲೂಕು ನಾಗರಿಕ ವೇದಿಕೆಯ ಅಧ್ಯಕ್ಷ ರೋಹನ್ ಗೌಡ ಅವರು ಎಚ್ಚರಿಸಿದ್ದಾರೆ.
ವೇದಿಕೆಯ ಸದಸ್ಯರು ಹಾಗೂ ನಾಗರಿಕರಿಗೆ ತಿಳಿಸಿರುವ ಅವರು, ತಮ್ಮ ಸಂಘಟನೆಯು ಅಧಿಕೃತವಾಗಿ "ಮುಳಬಾಗಿಲು ತಾಲೂಕು ನಾಗರಿಕ ವೇದಿಕೆಯ ಸಂವಿಧಾನ"ವನ್ನು ಒಂದು ವರ್ಷದ ಹಿಂದೆಯೇ ಅನುಮೋದಿಸಿದ್ದು, ಅದರ ದಾಖಲಾತಿಗಳು ತಮ್ಮ ಬಳಿ ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ. ಈ ಸಂವಿಧಾನದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ (https://mulbagal.org) ಮೊದಲೇ ಲಗತ್ತಿಸಲಾಗಿದ್ದು, ಸಾರ್ವಜನಿಕರು ಅದನ್ನು ಪರಿಶೀಲಿಸಬಹುದಾಗಿದೆ.
ಕೆಲವರು ಈ ವಿಷಯವನ್ನು ತಪ್ಪಾಗಿ ಅರ್ಥೈಸುತ್ತಿರುವುದನ್ನು ಗಮನಿಸಿದ ಅಧ್ಯಕ್ಷರು, ತಾವು ಕೆಲವು ಮಾಧ್ಯಮಗಳಲ್ಲಿ ದುರ್ನಡತೆ ತೋರಿದ ನೌಕರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ ಸಂದರ್ಭದಲ್ಲಿ, ಎಲ್ಲಿಯೂ ಭಾರತದ ಸಂವಿಧಾನವನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಾಗಿ, ತಮ್ಮ ನಾಗರಿಕ ವೇದಿಕೆಯ ಸಂವಿಧಾನವು ನಾಗರಿಕರನ್ನು ಚಪ್ಪಲಿಯಂತೆ ರಕ್ಷಿಸುತ್ತಾ, ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಾ ಭಾರತದ ಸಂವಿಧಾನವನ್ನು ಎತ್ತಿ ಹಿಡಿಯುತ್ತದೆ ಎಂಬ ಅರ್ಥದಲ್ಲಿ ಹೇಳಿರುವುದನ್ನು ತಿರುಚಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮಹತ್ವದ ವಿಷಯವನ್ನು ಈಗ ಗಮನಿಸಲಾಗಿದೆ ಎಂದು ಅವರು ತಿಳಿಸಿದರು.
ಈ ದುರ್ಘಟನೆಗೆ ಮುಖ್ಯ ಕಾರಣವೆಂದರೆ, ಜನರಲ್ಲಿ ಭಾರತದ ಸಂವಿಧಾನದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು. ಹೀಗಾಗಿ, ಸಂವಿಧಾನವನ್ನು ಓದುವ ಆಂದೋಲನವನ್ನು (Samvidhana Odhu Andholan) ಮುಳಬಾಗಿಲಿನಲ್ಲಿ ಹಮ್ಮಿಕೊಳ್ಳಲು ನಮ್ಮ ಸಂಘಟನೆ ಸಿದ್ಧವಿದೆ ಎಂದು ರೋಹನ್ ಗೌಡ ಹೇಳಿದರು.
ತಮ್ಮ ಹೇಳಿಕೆಯಲ್ಲಿ ಸಂವಿಧಾನದ ವಿಧಿ 226ರ ಮಹತ್ವವನ್ನು ವಿವರಿಸಿದ ರೋಹನ್ ಗೌಡ, ಈ ವಿಧಿಯು ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಅಥವಾ ಯಾವುದೇ ಸಾರ್ವಜನಿಕ ಪ್ರಾಧಿಕಾರವು ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದಾಗ ನೇರವಾಗಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವ ಅಧಿಕಾರವನ್ನು ನೀಡುತ್ತದೆ. ಈ ಪ್ರಕರಣದಲ್ಲಿ, ಬೆಸ್ಕಾಂ ನೌಕರನ ದುರ್ನಡತೆಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಒಂದು ವೇಳೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾದರೆ, ಸಂತ್ರಸ್ತ ನಾಗರಿಕರು ಮತ್ತು ನಮ್ಮ ವೇದಿಕೆಯು ನ್ಯಾಯಕ್ಕಾಗಿ ವಿಧಿ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯದ ಮೊರೆ ಹೋಗುವುದು ಖಚಿತ ಎಂದು ಅವರು ತಿಳಿಸಿದರು.
ಈ ವಿಷಯವಾಗಿ ತಮ್ಮ ಸಂಘಟನೆಗೆ ಮಾನನಷ್ಟ ಉಂಟುಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಕರ್ನಾಟಕದ ಅತ್ಯುನ್ನತ ಕಾನೂನು ತಜ್ಞರನ್ನು ಭೇಟಿಯಾಗಿರುವುದಾಗಿ ರೋಹನ್ ಗೌಡ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಯಾವುದೇ ಚಟುವಟಿಕೆಗಳನ್ನು ಪ್ರಶ್ನಿಸುವವರು ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದನ್ನು ಕಲಿಯಬೇಕು. ಯಾವುದೇ ಸಮಸ್ಯೆಗಳಿದ್ದರೂ ನ್ಯಾಯಾಲಯವು ಅದನ್ನು ಬಗೆಹರಿಸುತ್ತದೆ ಎಂಬುದನ್ನು ಸಾಬೀತುಪಡಿಸಲು ತಾವು ಈ ಹಿಂದೆ ಅನೇಕ ನ್ಯಾಯಯುತ ಸವಾಲುಗಳನ್ನು ಎದುರಿಸಿದ್ದೇವೆ ಎಂದಿದ್ದಾರೆ.
ಅದೇ ರೀತಿ, ಈ ಬಾರಿಯೂ ಸಾರ್ವಜನಿಕ ಹಿತಾಸಕ್ತಿಗಾಗಿ ದಾಖಲಿಸಿರುವ ಪ್ರಕರಣವನ್ನು ಉನ್ನತ ನ್ಯಾಯಾಲಯದವರೆಗೆ ತೆಗೆದುಕೊಂಡು ಹೋಗಿ, ನಾಗರಿಕರ ಭಾವನೆಗಳಿಗೆ ಧಕ್ಕೆ ತಂದಿರುವ ಅಧಿಕಾರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂಬ ಭರವಸೆಯನ್ನು ಎಲ್ಲಾ ನಾಗರಿಕರು ಇಡಬೇಕೆಂದು ಅವರು ಮನವಿ ಮಾಡಿದ್ದಾರೆ.
Integrity
Promoting ethical journalism for Mulbagal community.
News
Updates
+91-9480563131
© 2024. All rights reserved.