ಮುಳಬಾಗಿಲಿನಲ್ಲಿ ಕೋಲಾರದ ಅಡಿಷನಲ್ ಎಸ್‌. ಪಿ ಶ್ರೀ ಜಗದೀಶ್ ಅವರೊಂದಿಗೆ ವಿಶೇಷ ಸಂದರ್ಶನ- ಪ್ರತಿದಿನದ ಜ್ಞಾನ ಮತ್ತು ಮೌಲ್ಯಗಳ ದೃಷ್ಟಿಕೋನ

ಪ್ರಬುದ್ಧ ಕರ್ತವ್ಯದೊಂದಿಗೆ, ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ವಿಚಾರಧಾರೆಯನ್ನು ಶ್ರೀ ಜಗದೀಶ್ ಮುಳಬಾಗಿಲು ನಾಗರೀಕರ ವೇದಿಕೆಯ ಅಧ್ಯಕ್ಷರಾದ ರೋಹನ್ ಕುಮಾರ್. ಕೆ ರವರೊಂದಿಗೆ ಹಂಚಿಕೊಂಡರು. ಅವರ ಮಾತುಗಳಲ್ಲಿ ಸಾಮಾಜಿಕ ಕಳಕಳಿಯ ಭಾವನೆ, ವಿಮರ್ಶಾತ್ಮಕ ಚಾತುರ್ಯ ಮತ್ತು ಜ್ಞಾನಪೂರ್ಣ ವಿಚಾರಗಳು ತುಂಬಿದ್ದು, ಅವರ ಅನುಭವಗಳು ನಮ್ಮ ಪೂರ್ವಜರು ನಿರ್ವಹಿಸಿದ್ದ ಪ್ರತಿದಿನದ ಕರ್ಮಗಳ ಮಹತ್ವವನ್ನು ವ್ಯಕ್ತಪಡಿಸಿತು.

MULBAGALSTATENEWS

editor@kmfnews

4/3/20251 min read

ಮುಳಬಾಗಿಲಿನಲ್ಲಿ ಕೋಲಾರದ ಅಡಿಷನಲ್ ಎಸ್ ಪಿ ಶ್ರೀ ಜಗದೀಶ್ ಅವರೊಂದಿಗೆ ವಿಶೇಷ ಭೇಟಿ

ಇಂದು ಕೋಲಾರದ ಅಡಿಷನಲ್ ಎಸ್ ಪಿ ರವರಾದ ಶ್ರೀ ಜಗದೀಶ್ ರವರನ್ನು ಮುಳಬಾಗಿಲು ನಗರ ಠಾಣಾ ಆರಕ್ಷಕರ ಕಚೇರಿಯಲ್ಲಿ ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ, ಸಾರ್ವಜನಿಕ ಜ್ಞಾನ ವರ್ಧನೆಗಾಗಿ ನಮ್ಮ ಹಿಂದಿನ ಜ್ಞಾನಿಗಳು ಮತ್ತು ಪೂರ್ವಜರು ತಮ್ಮ ಮಾರ್ಗದರ್ಶನ ಮತ್ತು ಅನುಭವಗಳನ್ನು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿ, ಮತ್ತಷ್ಟು ಸದೃಢ ಮತ್ತು ಜ್ಞಾನಯುಕ್ತ ಸಮಾಜದ ನಿರ್ಮಾಣಕ್ಕಾಗಿ ತಾಳೆಗರಿಗಳಲ್ಲಿ ವಚನ ಜ್ಞಾನದ, ಬೆಲೆಕಟ್ಟಲಾಗದಂತಹ ಜ್ಞಾನ ಶಕ್ತಿಯನ್ನು ಕೊಟ್ಟಿರುವುದರ ಕುರಿತು ಚರ್ಚೆ ಮಾಡಲಾಯಿತು. ಅಂತಹ ವಚನ ಸಾಹಿತ್ಯವನ್ನು ತಾಳೆಗರಿಗಳಿಂದ ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ, 30 ಲಕ್ಷಕ್ಕೂ ಹೆಚ್ಚು ಜ್ಞಾನ ತುಂಬಿದ ತಾಳೆಗರಿಗಳಿಂದ ವಚನಗಳನ್ನು ಎಲ್ಲರಿಗೂ ತಲುಪಿಸುವಂತಹ ವ್ಯವಸ್ಥೆಯನ್ನು ಅಶೋಕ್ ದೊಮ್ಮಲೂರು ಮತ್ತು "ಒಂದೇ ಭಾರತ" ಲೋಕೇಶ್ ಅವರು ರಾಷ್ಟ್ರೀಯ ಕಲ್ಯಾಣ ಹಾಗೂ ಜ್ಞಾನ ವರ್ಧನೆಗೆ ನೀಡಿರುವ ಪಾತ್ರವು ಪ್ರಸ್ತಾಪಿತವಾಯಿತು.

ಅವರ ಪ್ರಯತ್ನದ ಪೂರಕ ಚಟುವಟಿಕೆಯಾಗಿ, ಸಮಾಜದಲ್ಲಿ ಸರಿಜ್ಞಾನವನ್ನು ಹೊಂದಿರುವ ಸದೃಢತೆಯತ್ತ ನಿಜವಾದ ಸಾಮಾಜಿಕ ಕಳಕಳಿಯುಳ್ಳ ಕೋಲಾರದ ಅಡಿಷನಲ್ ಎಸ್‌. ಪಿ ಶ್ರೀ ಜಗದೀಶ್ ರವರನ್ನು ಭೇಟಿಯಾಗಿ, ಒಂದು ಅಮೂಲ್ಯವಾದ ಜ್ಞಾನಪ್ರತಿಯನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ, ಪ್ರಬುದ್ಧ ಕರ್ತವ್ಯದೊಂದಿಗೆ, ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ವಿಚಾರಧಾರೆಯನ್ನು ಶ್ರೀ ಜಗದೀಶ್ ಮುಳಬಾಗಿಲು ನಾಗರೀಕರ ವೇದಿಕೆಯ ಅಧ್ಯಕ್ಷರಾದ ರೋಹನ್ ಕುಮಾರ್. ಕೆ ರವರೊಂದಿಗೆ ಹಂಚಿಕೊಂಡರು. ಅವರ ಮಾತುಗಳಲ್ಲಿ ಸಾಮಾಜಿಕ ಕಳಕಳಿಯ ಭಾವನೆ, ವಿಮರ್ಶಾತ್ಮಕ ಚಾತುರ್ಯ ಮತ್ತು ಜ್ಞಾನಪೂರ್ಣ ವಿಚಾರಗಳು ತುಂಬಿದ್ದು, ಅವರ ಅನುಭವಗಳು ನಮ್ಮ ಪೂರ್ವಜರು ನಿರ್ವಹಿಸಿದ್ದ ಪ್ರತಿದಿನದ ಕರ್ಮಗಳ ಮಹತ್ವವನ್ನು ವ್ಯಕ್ತಪಡಿಸಿತು.

ಅವರು ತಮ್ಮ ಬಾಲ್ಯದ ದಿನಗಳ ಅನುಭವಗಳನ್ನು ಹಂಚಿಕೊಳ್ಳುತ್ತ, ಮನುಷ್ಯನ ಪ್ರಗತಿಯು ಸ್ವಾರ್ಥರಹಿತ ಜೀವನದಿಂದ ಸಾಧ್ಯವಿದೆ ಎಂದು ವಿವರಿಸಿದರು. ಮೂಢನಂಬಿಕೆಗಳನ್ನು ತೊಡೆದು ಹಾಕಿ, ಪ್ರಾಮಾಣಿಕ ಜ್ಞಾನವನ್ನು ಅಳವಡಿಸಿಕೊಂಡಾಗ, ಸಮಾಜದಲ್ಲಿ ಐಕ್ಯತೆ ಮತ್ತು ರಾಷ್ಟ್ರದ ಹಿತಕ್ಕಾಗಿ ಒಗ್ಗಟ್ಟನ್ನು ತಲುಪಬಹುದು ಎಂದು ಅವರು ಒತ್ತಿಹೇಳಿದರು.

ಅವರಿಂದ ಮಾರ್ಗದರ್ಶಕವಾಗಿ ಪ್ರಸ್ತಾಪಿತವಾದ ಸೇವಾಕ್ಷೇತ್ರಕ್ಕೆ ಹಾಗೂ ಯುವ ಜನತೆಗೆ, ಪ್ರಸಕ್ತ ವಾಸ್ತವಕ್ಕೆ ಅವಶ್ಯಕತೆ ಇರುವ ಅಗತ್ಯವಾದ ಗುರಿ ಮತ್ತು ಸರಿಯಾದ ಸಮಯದ ಅರಿವು, ಎಲ್ಲರೂ ರೂಡಿಸಿಕೊಳ್ಳಬೇಕಾಗಿರುವುದು ಅತಿ ಮುಖ್ಯ ಅಂಶವಾಗಿದೆ.

ನಾವು ಇಷ್ಟೆಲ್ಲ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿದಾಗ ಮತ್ತು ಈ ವಿಷಯಗಳಲ್ಲಿ ಬಂದಿರುವಂತಹ ಶಬ್ದಗಳ ಬಳಕೆ ಮತ್ತು ಪದ ಬಳಕೆ ಹಾಗೂ ವಿಷಯ ವ್ಯಾಪ್ತಿ ಎಲ್ಲವನ್ನು ಗಮನಿಸಿದಾಗ ಒಂದನ್ನು ಸಮಾಜ ಅರಿತುಕೊಳ್ಳಬೇಕು, ಅದೇನೆಂದರೆ ನಿಜವಾದ ಜ್ಞಾನವನ್ನು ಮತ್ತು ಮೌಲ್ಯಗಳನ್ನು ಹೊಂದಿರುವಂತಹ ಅಧಿಕಾರಿಗಳಿಂದ ಮಾತ್ರ ಸಂವಿಧಾನದ ಆಡಳಿತ ವ್ಯವಸ್ಥೆಗೆ ಸುಧಾರಣೆ ಹಾಗೂ ರಾಷ್ಟ್ರೀಯ ಮೌಲ್ಯಗಳುಳ್ಳ ಸಮಾಜವನ್ನು ಕಟ್ಟಲು ಇಂತಹ ಜ್ಞಾನ ಇರುವಂತಹ ಅಧಿಕಾರಿಗಳು ಬಹಳ ಮುಖ್ಯ ಎಂಬುದನ್ನು ಸಮಾಜವು ಗಮನಿಸಬೇಕು ಹಾಗೂ ಪ್ರಸಕ್ತ ಪೀಳಿಗೆಯ ಯುವ ಜನತೆ ಇಂತಹ ಅಧಿಕಾರಿಗಳಿಂದ ಮೌಲ್ಯಗಳನ್ನು ಅರಿತು ಸಮಾಜವನ್ನು ಕಟ್ಟಲು ಮಾರ್ಗದರ್ಶನವನ್ನು ಪಡೆಯುವುದು ಸೂಕ್ತ.

ಭೌಗೋಳಿಕ ಪ್ರದೇಶದ ಅನ್ವಯ ಗಡಿಭಾಗ ಎಂತಲೂ ಹಾಗೂ ನಮಗೆ ಸಂವಿಧಾನದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದವರೆಗೆ ತಲುಪಲು ಬಹಳಷ್ಟು ನ್ಯೂನ್ಯತೆಗಳು ಇರುವಂತಹ ನಮ್ಮ ಮಂಕುತಿಮ್ಮನ ಕಗ್ಗದ ಅಜ್ಜನ ಊರಾದ ಮುಳಬಾಗಿಲಿನಲ್ಲಿ, ನಿಜಕ್ಕೂ ಡಿ. ವಿ.ಜಿ ಯವರ ನೆನಪುಗಳನ್ನು ಜೀವಂತ ಉಳಿಸಿರುವ ಕಗ್ಗಗಳಂತೆ, ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮದೇ ಆದ ಕೊಡುಗೆಯನ್ನು ಜ್ಞಾನ ರೂಪದಲ್ಲಿ ಹಂಚುತ್ತಾನೆ ಎಂಬುದಕ್ಕೆ ಇಂತಹ ಜ್ಞಾನಾದರ್ಶಯುಕ್ತ ಅಧಿಕಾರಿಗಳೇ ಒಂದು ನೈಜ ಉದಾಹರಣೆ...

ಇಂತಹ ಅಧಿಕಾರಿಗಳು ನಮ್ಮ ಜಿಲ್ಲೆಗೆ ಸೇವೆ ಸಲ್ಲುಸುತ್ತಿರುವುದು ನಿಜಕ್ಕೂ ಸಂತಸದ ವಿಷಯ, ಸೃಜನತೆ ಮತ್ತು ಗೌರವ ಪೂರ್ವಕತೆಯಾಗಿ ಇಂಥವರಿಗೆ ಮುಳಬಾಗಿಲು ತಾಲೂಕು ನಾಗರೀಕರ ವೇದಿಕೆ ವತಿಯಿಂದ ಎಲ್ಲಾ ನಾಗರೀಕರ ಪರವಾಗಿ ಮನಃಪೂರ್ವಕ ಧನ್ಯವಾದಗಳು.