ಕೋಲಾರ ಜಿಲ್ಲೆಯ ನ್ಯಾಯಕ್ಕಾಗಿ ಮಿಡಿಯುವ ಕೂಗು
ಈ ಲೇಖನವು ಕೋಲಾರ ಜಿಲ್ಲೆಯ, ವಿಶೇಷವಾಗಿ ಮುಳಬಾಗಿಲು ತಾಲೂಕು ನಿವಾಸಿಗಳು ಎದುರಿಸುತ್ತಿರುವ ತೀವ್ರ ಅನ್ಯಾಯವನ್ನು ಅರ್ಥ ಮಾಡಿಸಿಕೊಡುತ್ತದೆ. ಅಪರಾಧಿಪರ ರಾಜಕಾರಣಿಗಳು, ಹಣದ ಆಸೆಗಾಗಿ ಸಂವಿಧಾನವನ್ನು ಲೆಕ್ಕಿಸದೆ ಹಣಗಾಹಿ ವ್ಯಕ್ತಿಯ ಹಿಂಬಾಲಕರಾಗಿ, ಅಪರಾಧಿಯನ್ನು ಎಸ್‌ಸಿ ಮತ್ತು ಎಸ್‌ಟಿ ಜಾತಿಗಳ ಸದಸ್ಯರೆಂದು ಅಸತ್ಯವಾಡುವ ಮೂಲಕ ಸಾರ್ವಜನಿಕರನ್ನು ತಪ್ಪು ದಾರಿಗೆ ದೂಡುತ್ತಿರುತ್ತಾರೆ. ಈ ಸ್ಪಷ್ಟ ನಿರ್ಲಕ್ಷ್ಯವು ಕೇವಲ ವ್ಯವಸ್ಥೆಯನ್ನು ಮೋಸಗೊಳ್ಳಿಸುವುದಲ್ಲದೆ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ಸಬಲೀಕರಣ ಗೊಳಿಸುವ ಆಶಯಗಳನ್ನು ಹೊತ್ತಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಜಿಯವರ ಕನಸನ್ನು ನಿಂದಿಸುತ್ತದೆ. ಈ ಲೇಖನವು ಭಾರತದ ಸಂವಿಧಾನದ ಪ್ರತಿಪಾದಿಸಿರುವ ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಅನುಸರಿಸಲು ತಕ್ಷಣದ ಕ್ರಮಕ್ಕೆ ಕರೆ ನೀಡುತ್ತದೆ.
NATIONALMULBAGALSTATENEWS
Rohan kumar K
9/24/20241 min read


ಈ ಲೇಖನವು ಕೋಲಾರ ಜಿಲ್ಲೆಯ, ವಿಶೇಷವಾಗಿ ಮುಳಬಾಗಿಲು ತಾಲೂಕು ನಿವಾಸಿಗಳು ಎದುರಿಸುತ್ತಿರುವ ತೀವ್ರ ಅನ್ಯಾಯವನ್ನು ಅರ್ಥ ಮಾಡಿಸಿಕೊಡುತ್ತದೆ. ಅಪರಾಧಿಪರ ರಾಜಕಾರಣಿಗಳು, ಹಣದ ಆಸೆಗಾಗಿ ಸಂವಿಧಾನವನ್ನು ಲೆಕ್ಕಿಸದೆ ಹಣಗಾಹಿ ವ್ಯಕ್ತಿಯ ಹಿಂಬಾಲಕರಾಗಿ, ಅಪರಾಧಿಯನ್ನು ಎಸ್‌ಸಿ ಮತ್ತು ಎಸ್‌ಟಿ ಜಾತಿಗಳ ಸದಸ್ಯರೆಂದು ಅಸತ್ಯವಾಡುವ ಮೂಲಕ ಸಾರ್ವಜನಿಕರನ್ನು ತಪ್ಪು ದಾರಿಗೆ ದೂಡುತ್ತಿರುತ್ತಾರೆ. ಈ ಸ್ಪಷ್ಟ ನಿರ್ಲಕ್ಷ್ಯವು ಕೇವಲ ವ್ಯವಸ್ಥೆಯನ್ನು ಮೋಸಗೊಳ್ಳಿಸುವುದಲ್ಲದೆ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ಸಬಲೀಕರಣ ಗೊಳಿಸುವ ಆಶಯಗಳನ್ನು ಹೊತ್ತಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಜಿಯವರ ಕನಸನ್ನು ನಿಂದಿಸುತ್ತದೆ. ಈ ಲೇಖನವು ಭಾರತದ ಸಂವಿಧಾನದ ಪ್ರತಿಪಾದಿಸಿರುವ ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಅನುಸರಿಸಲು ತಕ್ಷಣದ ಕ್ರಮಕ್ಕೆ ಕರೆ ನೀಡುತ್ತದೆ.
ಹೇಳಿಕೆಗಳು:
"ಎಲ್ಲೆಡೆ ಅನ್ಯಾಯವಿದ್ದರೆ ಅದು ಎಲ್ಲೆಡೆ ನ್ಯಾಯಕ್ಕೆ ಧಕ್ಕೆ." – ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
"ಯಾವುದೇ ಸಮುದಾಯದ ನಿಜವಾದ ಅಳತೆಯನ್ನು ಅದು ತನ್ನ ಅತ್ಯಂತ ದುರ್ಬಲ ಸದಸ್ಯರನ್ನು ಹೇಗೆ ನಡೆಸುತ್ತದೆ ಎಂಬುದರಲ್ಲಿ ಕಾಣಬಹುದು." – ಮಹಾತ್ಮ ಗಾಂಧೀ
"ನ್ಯಾಯ ವಿಳಂಬವು ನ್ಯಾಯ ನಿರಾಕರಿಸಲ್ಪಟ್ಟಂತೆಯೇ." – ವಿಲಿಯಮ್ ಇ. ಗ್ಲಾಡ್‌ಸ್ಟೋನ್
ಮುಳಬಾಗಿಲು ತಾಲೂಕು, ಕೋಲಾರ ಜಿಲ್ಲೆ – ಭಾರತ ಸಂವಿಧಾನದ ಲೇಖನ 14 ರಾಜ್ಯವು ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆ ಅಥವಾ ಭಾರತದೊಳಗೆ ಕಾನೂನಿನ ಸಮಾನ ರಕ್ಷಣೆಯನ್ನು ನಿರಾಕರಿಸಲು ಆಗುವುದಿಲ್ಲ ಎಂದು ಖಾತ್ರಿ ನೀಡುತ್ತದೆ. ಈ ಲೇಖನವು ಜಾತಿ, ವರ್ಣ, ಧರ್ಮ, ಜನ್ಮಸ್ಥಳ, ಮತ್ತು ಲಿಂಗದ ಆಧಾರದ ಮೇಲೆ ವ್ಯತ್ಯಾಸವನ್ನು ತಡೆಯಲು ಉದ್ದೇಶಿಸಲಾಗಿದೆ. ಆದರೆ, ಕೋಲಾರ ಜಿಲ್ಲೆಯ, ವಿಶೇಷವಾಗಿ ಮುಳಬಾಗಿಲು ತಾಲೂಕು ನಿವಾಸಿಗಳು ಒಂದು ದೊಡ್ಡ ಅನ್ಯಾಯದ ಎದುರು ನಿಲ್ಲುತ್ತಿದ್ದಾರೆ.
ಈ ಹಿಂದೆ ಕೋಲಾರ ಜಿಲ್ಲೆಯು ಅತಿ ಹೆಚ್ಚು ನ್ಯಾಯವಾದಿಗಳು ಮತ್ತು ನ್ಯಾಯಯುತ ಸಂಘ-ಸಂಸ್ಥೆಗಳು ಅಲ್ಲದೆ ಸರ್ಕಾರಿ ಸೇವೆಯಲ್ಲಿ ಉನ್ನತ ದರ್ಜೆಯ ಅಧಿಕಾರಿಗಳನ್ನು ಅತಿ ಹೆಚ್ಚು ನೀಡಿರುವ ಕೀರ್ತಿಗೆ ಒಳಪಟ್ಟಿರುತ್ತದೆ, ಇಂದು ವಿಪರ್ಯಾಸ ಎಂದರೆ ಇಂತಹ ಜಿಲ್ಲೆಯಲ್ಲಿ ಜನಪ್ರತಿನಿಧಿ ಒಬ್ಬ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಇಡೀ ವ್ಯವಸ್ಥೆಯನ್ನು ದಿಕ್ಕು ತಪ್ಪಿಸಿ, ಹಿಂದುಳಿದ ವರ್ಗಗಳ ಸಬಲೀಕರಣಕ್ಕೆಂದು ಮೀಸಲಾತಿ ಕಲ್ಪಿಸಿದ್ದರು ಸಹ, ಅದರ ಮೂಲಭೂತ ಆಶಯಗಳನ್ನು ತನ್ನ ಅತಿ ಬುದ್ಧಿವಂತಿಕೆಯಿಂದ ಮತ್ತು ಹಣದ ಅಹಮ್ಮಿನಿಂದ ಕಾರ್ಯಾಂಗದಲ್ಲಿನ ಕೆಲವು ಅಧಿಕಾರಿಗಳೊಂದಿಗೆ ಶಾಮಿಲಾಗಿ ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಿಸಿಕೊಂಡು, ಚುನಾಯಿತ ಪ್ರತಿನಿಧಿಯಾಗಿ ಎಲ್ಲ ವರ್ಗದ ಮುಳಬಾಗಿಲು ತಾಲೂಕಿನ ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದ ನಾಗರೀಕರನ್ನು ವಂಚಿಸಿರುವುದು ಆಘಾತಕಾರಿ ಮತ್ತು ರಾಷ್ಟ್ರಮಟ್ಟದ ಆಸಕ್ತಿಯನ್ನು ಸೆಳೆಯುವ ವಿಷಯವಾಗಿದೆ.
ಪ್ರಸಕ್ತ ಈ ಪ್ರಕರಣವು ಈಗಾಗಲೇ ನ್ಯಾಯಾಲಯದಲ್ಲಿ ತೀರ್ಪನ್ನು ಪಡೆದಿದ್ದರೂ ಸಹ, ಶಾಸಕಾಂಗದ ಮತ್ತು ಕಾರ್ಯಾಂಗದ ವೈಕರಿ ಇಂತಹ ವಿಷಯವಾಗಿ ಯಾವುದೇ ರೀತಿಯ ಹಿತಾಸಕ್ತಿ ಇಲ್ಲದಿರುವುದು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಸವಾಲು ಎಂಬಂತಾಗಿದೆ. ಸಂವಿಧಾನದ ಲೇಖನಿ 14ರಂತೆ ಕನಿಷ್ಠ ತಿಳುವಳಿಕೆಯಿಂದ ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಜನರಿಗೆ ಸಂವಿಧಾನದ ಬಗ್ಗೆ ಮತ್ತಷ್ಟು ನಂಬಿಕೆಯನ್ನು ತರಿಸುವ ಪ್ರಯತ್ನ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲು ಇರಬೇಕಾಗಿತ್ತು ಎಂಬುದನ್ನು ಮರೆಯದಿರಿ.
ಹಿಂದುಳಿದ ವರ್ಗಗಳ ಅಂದರೆ ಎಸ್ಸಿ ಎಸ್ಟಿ ಸಮುದಾಯಗಳನ್ನು ಹೊರತುಪಡಿಸಿ ಬೇರೆ ಸಮುದಾಯದ ಮತ್ತು ಬೇರೆ ವರ್ಗಗಳ ನಾಯಕರು ಇದೇ ಜಿಲ್ಲೆಯಲ್ಲಿ ಇದ್ದರೂ ಸಹ, ಈ ವಿಚಾರವಾಗಿ ಹಿಂದುಳಿದ ವರ್ಗಗಳಿಗೆ ಆಗಿರುವ ಮೀಸಲಾತಿ ವಂಚನೆಯ ದ್ರೋಹವು ಋಜು ಹಾಗಿದ್ದರೂ ಸಹ, ಹಿಂದುಳಿದ ವರ್ಗಗಳ ಪರವಾಗಿ ಧ್ವನಿ ಎತ್ತದಿರುವುದು ಏಕೆ ಎಂಬುದು ಯುವಜನತೆಯ ಮನದಲ್ಲಿ ಮತ್ತು ನಾಗರೀಕರಲ್ಲಿ ಪ್ರಶ್ನೆಯಾಗಿ ಉಳಿದಿದೆ.
ಜಾತಿ ನಿಂದನೆ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ವರ್ಚಸ್ಸನ್ನು ಮತ್ತು ತನ್ನ ವೈಯಕ್ತಿಕ ಸಮಾನತೆ ಮತ್ತು ನ್ಯಾಯಕ್ಕಾಗಿ ಅಟ್ರಾಸಿಟಿ ದಾಖಲಿಸಿ ತನಗೆ ಸಿಗಬೇಕಾದ ಘನತೆಯನ್ನು ಪಡೆಯಲು ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಘನತೆಯನ್ನು ಈ ಪ್ರಕರಣವು ಸವಾಲಸಗಿರುವಂತೆ ಕಾಣುತ್ತಿದೆ.
ಅಪರಾಧಿ ವಂಚಕ ಶಾಸಕ ಇಡೀ ಮುಳಬಾಗಿಲು ತಾಲೂಕಿನ ಹಿಂದುಳಿದ ವರ್ಗಗಳ ಅಂದರೆ ಎಸ್ಸಿ ಎಸ್ಟಿ ಸಮುದಾಯಗಳಿಗೆ ಸಿಗಬೇಕಿದ್ದ ಗೌರವ ಮತ್ತು ಸಮಾನತೆಯ ಸಬಲೀಕರಣದ ಅಂಬೇಡ್ಕರ್ಜಿ ರವರ ಆಶಯಗಳ ಮೀಸಲಾತಿ ವ್ಯವಸ್ಥೆಯನ್ನು ಸುಳ್ಳು ಜಾತಿ ಪ್ರಮಾಣ ನೀಡಿ , ಇಡೀ ರಾಷ್ಟ್ರದ ಸಬಲೀಕರಣ ವ್ಯವಸ್ಥೆಗೆ ಸವಾಲಿಸಗಿ, ಪ್ರಸಕ್ತ ನ್ಯಾಯಾಂಗ ವ್ಯವಸ್ಥೆಯಲ್ಲಿ ಶಿಕ್ಷೆಯನ್ನು ಪಡೆದು ರಾಜ ರೋಷವಾಗಿ ಪ್ರಸ್ತುತ ಕೋಲಾರ ತಾಲೂಕಿನ ಶಾಸಕನಾಗಿ, ಇದೇ ಸಂವಿಧಾನವನ್ನು ಬಳಸಿಕೊಂಡು ಸಾರ್ವಜನಿಕರ ಹಣದಲ್ಲಿ ಬದುಕುತ್ತಿದ್ದರೂ, ವೈಯಕ್ತಿಕ ನ್ಯಾಯಕ್ಕಾಗಿ ಅಟ್ರಾಸಿಟಿಗಳನ್ನು ಬಳಸಿ ಸಮಾಜ ತಿದ್ದುತ್ತಿದ್ದ ಅನೇಕರು ಇಲ್ಲಿಯ ತನಕ ಸಮುದಾಯಕ್ಕೆ ಆಗಿರುವ ದ್ರೋಹದ ವಿಚಾರವಾಗಿ ಅಟ್ರಾಸಿಟಿ ಹಾಕದಿರುವುದು ಏಕೆ ಎಂಬುದು ಒಂದು ಒಂದು ಆಘಾತಕಾರಿ ವಿಷಯವೆಯಾಗಿದೆ.
ಪ್ರಸಕ್ತ ನ್ಯಾಯಾಂಗದಿಂದ ಎಲ್ಲಾ ರೀತಿಯಲ್ಲಿ ಹೊರದೂಡಲ್ಪಟ್ಟಿರುವ ಈ ಪ್ರಕರಣ ನಮ್ಮ ದೇಶದಲ್ಲಿ ಹಣ ಶಕ್ತಿಗಿಂತ ನ್ಯಾಯ ಶಕ್ತಿಯೇ ದೊಡ್ಡದು ಎಂಬುದನ್ನು ನ್ಯಾಯಾಂಗ ವ್ಯವಸ್ಥೆ ಸಂವಿಧಾನವನ್ನು ಎತ್ತಿ ಹಿಡಿಯುವುದರ ಮುಖಾಂತರ ಸಾಬೀತು ಮಾಡಿದೆ. ಇಷ್ಟು ದಿನ ಹತ್ತಾರು ಪ್ರಕರಣಗಳನ್ನು ಅಪರಾಧಿಯ ಮೇಲೆ ಹಾಕಲು ಸಾಧ್ಯವಿರಲಿಲ್ಲ, ಏಕೆಂದರೆ ಇಷ್ಟು ದಿನ ಪ್ರಕರಣ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇತ್ತು. ಈಗಿನ ಪರಿಸ್ಥಿತಿಯ ಪ್ರಕಾರ ಹೇಳುವುದಾದರೆ, ಪ್ರಸಕ್ತ ಪ್ರಕರಣ ಯಾವ ಮಟ್ಟಕ್ಕೆ ಇದೆ ಎಂದರೆ ಇಡೀ ದೇಶದ ಯಾವುದೇ ಮೂಲೆಯಿಂದ ಯಾರು ಬೇಕಾದರೂ ಸಂವಿಧಾನ ದ್ರೋಹ ಎಂಬ ವಿಚಾರದೊಂದಿಗೆ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ಸಂವಿಧಾನದ ಆಶಯಗಳಿಗೆ ದ್ರೋಹ ಎಂಬ ವಿಚಾರದಾರಣೆಯೊಂದಿಗೆ ಯಾವುದೇ ವ್ಯಾಪ್ತಿಯ ಡಿವೈಎಸ್ಪಿ ರವರಿಗೆ ಅಟ್ರಾಸಿಟಿ ಮತ್ತು ಇತರೆ ಪ್ರಕರಣಗಳನ್ನು ದಾಖಲಿಸಲು ಅವಕಾಶ ತೆರೆದಿರುತ್ತದೆ ಎಂಬಂತಹ ಸಾಧ್ಯತೆಗಳು ಇರುತ್ತದೆ.
ಈ ಪ್ರಕರಣವು ಇಷ್ಟಕ್ಕೆ ನಿಲ್ಲದೆ, ಸಂವಿಧಾನಕ್ಕೆ ದ್ರೋಹ ಮಾಡಿರುವ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಕಪ್ಪು ಹಣದ ಶಕ್ತಿಯಿಂದ ಭ್ರಷ್ಟಾಚಾರದ ಪರಮಾವಧಿ ಎಂಬಂತೆ ಕಾರ್ಯಾಂಗದಲ್ಲಿನ ರಾಷ್ಟ್ರ ದ್ರೋಹಿ ಕಿಡಿಗೇಡಿಗಳನ್ನು ಬಳಸಿಕೊಂಡು ಹಿಂದುಳಿದ ವರ್ಗಗಳಿಗೆ ಮಾಡಿರುವ ದ್ರೋಹವೇ ಆಗಿದೆ. ಪ್ರಸ್ತುತ ಅಪರಾಧಿಯ ಜೊತೆಗೆ ಪ್ರಕರಣದಲ್ಲಿ ಇವನಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಹಾಗೂ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳಲ್ಲಿ ನಿರ್ಲಕ್ಷೆ ಧೋರಣೆ ತೋರಿರುವ, ನೇರವಾಗಿ ಹೇಳುವುದಾದರೆ ಹಣ ಪಡೆದು ಭ್ರಷ್ಟಾಚಾರ ಮಾಡಿ ನಮ್ಮ ದೇಶದ ನಂಬಿಕೆಗೆ ದ್ರೋಹ ಬಗೆದಿರುವ ದೇಶದ್ರೋಹಿ ಕಾರ್ಯಾಂಗದಲ್ಲಿನ ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಅಧಿಕಾರಿಗಳನ್ನು ವಜಾಗೋಳಿಸಲು ಮತ್ತು ಇವರನ್ನು ರಾಷ್ಟ್ರ ದ್ರೋಹಿಗಳು ಎಂದು ಇಡೀ ದೇಶಕ್ಕೆ ತಿಳಿಸಲು ಮತ್ತೊಂದು ಪ್ರಕರಣವನ್ನು ಈ ದೇಶದ ಯಾವುದೇ ಮೂಲೆಯ ಯಾವೊಬ್ಬ ಪ್ರಜೆಯಾದರು ದಾಖಲಿಸಿ, ಸಂವಿಧಾನದ ಆಶಯಗಳನ್ನು ಉಳಿಸಿ ಮುಂದಿನ ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಮೇಲೆ ಗೌರವ ನಂಬಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಕಾರಣರಾಗಬಹುದು ಎಂಬುದು ಸುಳ್ಳಲ್ಲ.
ಒಂದು ರಾಷ್ಟ್ರೀಯ ಪಕ್ಷದ ಚಿನ್ಹೆಯಿಂದ ಅಂದರೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ಗೆದ್ದಿರುವ ವ್ಯಕ್ತಿಯು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ, ಅದರಲ್ಲೂ ಹಿಂದುಳಿದ ವರ್ಗಗಳಿಗೆ ಸಬಲೀಕರಣಕ್ಕಾಗಿ ಕಲ್ಪಿಸಿದ್ದ ಮೀಸಲಾತಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿರುವ ವಿಚಾರ, ನ್ಯಾಯಾಲಯದಲ್ಲಿ ಪ್ರಕರಣವಾಗಿ, ಸರ್ವೋಚ್ಚ ನ್ಯಾಯಾಲಯದಿಂದ ವಿಚಾರಿಸಲ್ಪಟ್ಟು ಮಾರ್ಗದರ್ಶಿಸಿಕೊಂಡು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಇಂತಹ ರಾಜಕಾರಣಿಯನ್ನು ಶಿಕ್ಷಿಸಲು ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಅಟ್ರಾಸಿಟಿ ಮತ್ತು ಇತರೆ ಎಲ್ಲಾ ರೀತಿಯ ಕಾನೂನು ಕ್ರಮ ಅಪರಾಧಿಯ ಮೇಲೆ ಜರುಗಿಸಿ ಸಮಾಜಕ್ಕೆ ಸಂವಿಧಾನದಲ್ಲಿನ ಗೌರವ ಕಾಪಾಡುವ ವಿಚಾರ ನಡೆದಿದ್ದರೂ ಸಹ, ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಜನಸಾಮಾನ್ಯರಲ್ಲಿ ನಿರಾಸೆ ಮೂಡಿಸಿದ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಇಂತಹ ನೀಚ ರಾಜಕಾರಣ ಮಾಡಿರುವ ಅಪರಾಧಿ ರಾಜಕಾರಣಿಯನ್ನು ಪ್ರಸಕ್ತ ವಜಗೊಳಿಸಿ ಪ್ರಕರಣ ಮುಂದುವರಿಸಿ ನ್ಯಾಯವನ್ನು ಎತ್ತಿ ಹಿಡಿಯುವುದರ ಬದಲು, ಈ ವಿಚಾರವನ್ನು ಕಡೆಗಣಿಸಿ ಮೌನದ ಧಾರಣೆ ತೋರಿರುವುದು ಪ್ರಶ್ನಾರ್ಥಕವೂ ಆಗಿದೆ, ಇದಕ್ಕೆ ಪೂರಕವಾದಂತೆ ಪ್ರತಿಪಕ್ಷ ಸ್ಥಾನದಲ್ಲಿರುವ ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿ ಆಗಲಿ ಮತ್ತು ಅದರೊಂದಿಗೆ ವಿಲೀನಗೊಂಡಂತಿರುವ ಪ್ರಾಂತೀಯ ಪಕ್ಷ ಎಂದು ಬೊಬ್ಬೆ ಇಡುವ ಜೆಡಿಎಸ್ ಸಹ ಈ ವಿಚಾರವಾಗಿ ಮೌನವಹಿಸಿರುವುದು ಕಣ್ಣಿಗೆ ಕಾಣುವಂತೆ ಸಮಾಜದಲ್ಲಿ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಮೇಲೆ ಮತ್ತು ಅವರ ಏಳಿಗೆಗಾಗಿ ಎಂತಹ ಮನಸ್ಥಿತಿಯನ್ನು ಇಟ್ಟುಕೊಂಡಿರುತ್ತಾರೆ ಎಂದು ಒಮ್ಮೆ ಯೋಚಿಸಿಕೊಳ್ಳಲೇಬೇಕು ಎಂಬಂತಹ ನಡೆ ನಡೆಯುತ್ತಿದ್ದಾರೆ .
ಒಬ್ಬ ಸಾಮಾನ್ಯ ವ್ಯಕ್ತಿ ತಪ್ಪು ಮಾಡಿದ್ದರೆ ಅಂತಹವನನ್ನು ಮಾಧ್ಯಮಗಳಲ್ಲಿ ಅಪಮಾನಿಸಿ ಅತಿ ಶೀಘ್ರವಾಗಿ ನ್ಯಾಯ ದೊರಕಿಸಿ ಸಂವಿಧಾನವನ್ನು ಎತ್ತಿ ಹಿಡಿಯುವ ಸಮಾಜಮುಖಿ ಅನೇಕ ಸಂಘ-ಸಂಸ್ಥೆಗಳು ಮತ್ತು ಮಾಧ್ಯಮ ವರ್ಗದವರು, ಹಿಂದುಳಿದ ವರ್ಗಗಳಿಗೆ ಮತ್ತು ಅಂಬೇಡ್ಕರ್ಜಿಯವರ ಆಶಯಗಳಿಗೆ ಹಾಗೂ ಸಂವಿಧಾನಿಕ ವ್ಯವಸ್ಥೆಯ ಶಕ್ತಿಯನ್ನು ಕುಗ್ಗಿಸುವಂತಹ, ರಾಷ್ಟ್ರವೇ ನಾಚಿಸುವಂತಹ ಪ್ರಕರಣಕ್ಕೆ- ಯಾವುದೇ ರೀತಿಯ ಗಮನಿಕೆಯನ್ನು ಕೊಡದಿರುವುದು, ಹಿಂದುಳಿದ ವರ್ಗಗಳಿಗೆ ಮಾಡಿರುವ ಮೋಸ ಎಂಬಂತೆ ಕಾಣಿಸುತ್ತಿದೆ.
Integrity
Promoting ethical journalism for Mulbagal community.
News
Updates
+91-9480563131
© 2024. All rights reserved.