ಪ್ಲಾಸ್ಟರ್. ಆಫ್. ಪ್ಯಾರಿಸ್ (POP) ಗಣೇಶ ಮೂರ್ತಿಗಳ ಪ್ರೋತ್ಸಾಹನೆಯ ಹಿಂದಿರುವ ದುರುದ್ದೇಶ ಹಾಗೂ ದೇಶಕ್ಕೆ ಇದರಿಂದ ಆಗುವ ನಷ್ಟ... ನಮ್ಮಿಂದಲೇ ನಮ್ಮ ಮುಂದಿನ ಭವಿಷ್ಯದ ಪೀಳಿಗೆಯನ್ನು ನಾಶ ಮಾಡಿಸುವ ಷಡ್ಯಂತ್ರ...
ನಮ್ಮ ನೈಜ ಪ್ರಾಕೃತಿಕ ಜೀವನಶೈಲಿಯಲ್ಲಿ, ಇಂದು ಶ್ರಮವಿಲ್ಲದೆ ಬದುಕುವ ಪ್ರಕೃತಿಯನ್ನು ಹಾಳು ಮಾಡುವ ಹಾಗೂ ಎಲ್ಲಕ್ಕಿಂತ ನಮ್ಮ ರಾಷ್ಟ್ರೀಯ ಐಕ್ಯತೆಗೆ ಮುಂದೊಂದು ದಿನ ಧಕ್ಕೆಯನ್ನು ಉಂಟುಮಾಡುವ POP ಗಣೇಶನ ಗೊಂಬೆಗಳನ್ನು ನಿಜವಾದ ಭಾರತೀಯರು ಸ್ವಯಂ ತಮಗೆ ತಾವೇ ನಿಷೇಧಿಸಬೇಕು ಹಾಗೂ ಅನ್ಯಧರ್ಮಿಗಳಾದ ನಮ್ಮ ದೇಶದ ನಮ್ಮ ಸಹೋದರ ಸಹೋದರಿ ಇಂತಹ ಧರ್ಮ ದ್ರೋಹಗಳನ್ನು ಖಂಡಿಸಬೇಕು, ಸ್ವಾರ್ಥ ಭರಿತ ಹಾಗೂ ರಾಷ್ಟ್ರ ದ್ರೋಹಿ ಪ್ರಕೃತಿದ್ರೋಹಿ ಸಾಂಪ್ರದಾಯದ್ರೋಹಿ ವ್ಯಾಪಾರಿಕರಣವನ್ನು ನಾವು ಎಂದಿಗೂ ಪ್ರೋತ್ಸಾಹಿಸಬಾರದು. ನಮ್ಮ ಧರ್ಮದ ಬಗ್ಗೆ ಕನಿಷ್ಠ ಅಭಿಮಾನವಿದ್ದರೂ, ನೀವು ಮಣ್ಣಿನ ಗಣಪನನ್ನು ಪೂಜೆ ಮಾಡದೇ ಇದ್ದರೂ ಪರವಾಗಿಲ್ಲ ಆದರೆ ನಮ್ಮ ಪರಂಪರಾಗತ ಸನಾತನ ಧರ್ಮವನ್ನು ಹಾಳು ಮಾಡುವ POP ಗಣೇಶನ ಗೊಂಬೆಗಳನ್ನು ಪ್ರೋತ್ಸಾಹಿಸಬೇಡಿ.
MULBAGALSTATENEWSNATIONAL
Rohan kumar. K
8/30/20241 min read


ನಮಗೆಲ್ಲ ತಿಳಿದಿರುವ ಹಾಗೆ, ರಾಷ್ಟ್ರೀಯ ಹಬ್ಬಗಳು ಹಾಗೂ ನಮ್ಮ ಧಾರ್ಮಿಕ ಹಬ್ಬಗಳು ಸಂಪ್ರದಾಯಗಳನ್ನು ಹೊಂದಿದ್ದರೂ ಸಹ, ಅದರಲ್ಲಿನ ಮೂಲ ಖಂಡಿತವಾಗಿಯೂ ರಾಷ್ಟ್ರೀಯ ಐಕ್ಯತೆಗೆ ಪೂರಕವಾಗಿ ಇರುವಂತಹ ವಿಚಾರವು ಇರುತ್ತದೆ.
ಇಂತಹ ವೈಶಿಷ್ಟ್ಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯು ಒಂದು, ಏಕೆಂದರೆ ಗಣೇಶ ಚತುರ್ಥಿಯನ್ನು ನಮ್ಮ ಹಿಂದುಸ್ಥಾನದ ಮೂಲಗಳಲ್ಲಿಯೂ ವಿಜೃಂಭಣೆ ಮತ್ತು ಶ್ರದ್ಧೆಯಿಂದ ಆಚರಿಸುವ ವಿಷಯ ಸರ್ವೇಸಾಮಾನ್ಯವಾಗಿ ಕಾಣುತ್ತದೆ, ಇನ್ನು ಈ ಹಬ್ಬದ ಮತ್ತೊಂದು ವೈಶಿಷ್ಟ್ಯತೆ ಎಂದರೆ ಯುವ ಜನತೆಯಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಐಕ್ಯತೆಯನ್ನು ತುಂಬವ ಹಾಗೂ ಸಂಪ್ರದಾಯ ಬದ್ಧ ವೈಚಾರಿಕತೆಯೊಂದಿಗೆ ಭಕ್ತಿ ಶ್ರದ್ಧೆಯ ವಾತಾವರಣವನ್ನು ಕಣ್ಣು ತುಂಬಿಸಿ, ದೇವಸ್ಥಾನ ಮತ್ತು ಹಳ್ಳಿಗಳೆಲ್ಲ ಸೇರಿ ಊರಿನವರೆಲ್ಲ ಸಂತೋಷದಿಂದ ವೈಯಕ್ತಿಕ ವಿಷಯಗಳನ್ನು ಮರೆತು ಐಕ್ಯತೆಯಿಂದ ವಿಜೃಂಭಣೆಯಿಂದ ಒಂದೆಡೆ ಸೇರಿ ಕಲುಷಿ ರಾಜಕೀಯ ವಾತಾವರಣವನ್ನು ಮರೆಸುವಂತೆ ಶಾಸ್ತ್ರ ಬದ್ಧವಾದ ಮಣ್ಣಿನ ಗಣಪತಿಯನ್ನು ಭಕ್ತಿಯಿಂದ ಪ್ರಾರ್ಥಿಸಿ ಗ್ರಾಮೀಣ ಐಕ್ಯತೆಯನ್ನು ಸಮಾಜಕ್ಕೆ ಸಾರಿ ಹೇಳುತ್ತಿದ್ದ ರಾಜ ತಂತ್ರಗಾರಿಕೆಯೂ ಸಹ ಕಾಣಬಹುದು, ಇನ್ನು ನಗರ ಪ್ರದೇಶಗಳಲ್ಲಿ ನಾವೇನು ಕಡಿಮೆ ಎಂಬಂತೆ ತಾಲೂಕಿಗೆ ಒಂದು ಗಣೇಶ ಹಾಗೂ ನಗರಗಳಲ್ಲಿ ವಾರ್ಡ್ಗಳಿಗೆ ಒಂದು ಗಣೇಶ ಎಂಬುದರ ಜೊತೆಗೆ ಮಣ್ಣಿನಿಂದ ತಯಾರಿಸಿದ ಗಣೇಶನನ್ನು ಪೂಜಿಸುವ ಹಾಗೂ ಪ್ರಕೃತಿಯನ್ನು ನಷ್ಟ ಮಾಡದೇ ಸೇವಿಸುವ ವಿಧಾನದಲ್ಲಿ ಗಣೇಶ ಚತುರ್ಥಿ ನರವೇರುತ್ತಿದ್ದ ವಿಷಯಗಳು ರಾಷ್ಟ್ರ ದ್ರೋಹಿ ಸಂಘಗಳಿಗೆ ಮತ್ತು ರಾಷ್ಟ್ರ ದ್ರೋಹಿ ಆಲೋಚನಾಶೀಲತೆಯುಳ್ಳ ಅಧರ್ಮಿಗಳಿಗೆ ನಮ್ಮ ರಾಷ್ಟ್ರದ ಐಕ್ಯತೆಯ ಶಕ್ತಿಯ ಪಾಂಚಜನ್ಯದ ನಾದದಂತೆ ಕಣ್ ಕುಕ್ಕುತ್ತಿದ್ದದ್ದು ಸತ್ಯವೇ ಸರಿ.
ನಮ್ಮ ಹಿಂದುಸ್ಥಾನದಲ್ಲಿ ಎಷ್ಟೇ ಧರ್ಮ ಎಷ್ಟೇ ಜಾತಿ ಎಷ್ಟೇ ವಿಭೇದಗಳು ಇದ್ದರೂ, ನಾವೆಲ್ಲರೂ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಮೂಲಕ ನಮ್ಮ ಹಿಂದುಸ್ಥಾನದ ಹಿರಿಮೆಯನ್ನು ತನ್ನ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಐತಿಹಾಸಿಕ ಪಾರಂಪರಿಕ ಶಕ್ತಿಯ ಮುಖಾಂತರ ಎದುರಾಳಿಗಳಿಗೆ ಆಲೋಚನೆಯಲ್ಲೇ ಭಯ ಹುಟ್ಟಿಸುತ್ತಿದ್ದದ್ದು ಸತ್ಯ.
ಇಂತಹ ಬಲಿಷ್ಠ ಹಿಂದುಸ್ತಾನವನ್ನು ಕೇವಲ ಒಂದು ಕಡೆಯಿಂದ ಕೆಡವಲು ಸಾಧ್ಯ ಇಲ್ಲ ಎಂಬುದನ್ನು ಅರಿತ ಅನ್ಯ ಉತ್ತರ ಕುಮಾರನ ವಂಶಸ್ಥರು, ಅನ್ಯ ಅಧರ್ಮಿ ರಾಷ್ಟ್ರಗಳು, ಹೇಗಾದರೂ ಮಾಡಿ ನಮ್ಮನ್ನು ಕೆಡವ ಬೇಕು ಎಂಬ ಆಲೋಚನೆಯಿಂದ ಹೊರಹೊಮ್ಮಿದ ಒಂದು ಆಲೋಚನೆ ಏನೆಂದರೆ " ಒಂದು ರಾಷ್ಟ್ರವನ್ನು ಹಾಳು ಮಾಡಬೇಕಾದರೆ ಕಷ್ಟಪಡುವಂಥದ್ದು ಏನು ಇಲ್ಲ, ಬದಲಿಗೆ ಆ ರಾಷ್ಟ್ರದ ಸಂಸ್ಕಾರವನ್ನು ಸಂಪ್ರದಾಯವನ್ನು ಹಾಳು ಮಾಡಿದರೆ ಸಾಕು, ಆ ರಾಷ್ಟ್ರವು ತನಗೆ ತಾನೆ ಹಾಳಾಗುವುದರಲ್ಲಿ ಸಂದೇಹವೇ ಇಲ್ಲ ". ಈ ಆಲೋಚನೆ ಅಡಿಯಲ್ಲಿ ತಮ್ಮ ದುರುದ್ದೇಶವನ್ನು ಸಾಕಾರಗೊಳಿಸಲು ನಮ್ಮ ಹಿಂದುಸ್ಥಾನದ ಶಕ್ತಿಯುತ ಸಂಪ್ರದಾಯವುಳ್ಳ ವಿವಿಧ ವಳಸಂಪ್ರದಾಯಗಳ ತಳ ಹದಿಯ ಬಲಿಷ್ಠ ಹಿಂದುಗಳ ಆಚರಣೆಗಳನ್ನು ಕಾಲಕ್ರಮೇಣವಾಗಿ ಮರೆಮಾಚಿಸುವ ತಂತ್ರಗಾರಿಕೆ ದಶಕಗಳಿಂದ ನಡೆಯುತ್ತಲೇ ಬಂದಿದೆ ಅಂತಹ ಕುತಂತ್ರಕ್ಕೆ ಬಲಿಯಾಗುತ್ತಿರುವ ಅನೇಕ ಪರಂಪರಾಗತ ಆಚರಣೆಗಳಲ್ಲಿ ಗಣೇಶ ಚತುರ್ಥಿಯು ಒಂದ.
ಒಮ್ಮೆ ಒಂದು ಬಾರಿ ಆಲೋಚನೆ ಮಾಡಿ ಮಣ್ಣಿನಿಂದ ಬರಬೇಕಾದ ಗಣೇಶನನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ರೀತಿಯಲ್ಲಿ ತಂದಾಗ ಅದು ನಮ್ಮ ಸಾಂಪ್ರದಾಯಿಕ ಆಚರಣೆಯ ಶಕ್ತಿಯನ್ನು ನಾಶ ಮಾಡುತ್ತದೆ. ಹಳ್ಳಿಗೆ ಒಂದು ಸಾಂಪ್ರದಾಯಿಕ ಶಕ್ತಿಯ ಮಣ್ಣಿನ ಗಣೇಶ ಇಡುವುದರಿಂದ ರಾಜಕೀಯದ ಕಲ್ಮಶೇಯುಕ್ತ pop ಗಣೇಶನ ಗೊಂಬೆಗಳು ತಮ್ಮ ರಾಜಕೀಯ ಸ್ವಾರ್ಥ ಯುಕ್ತ ನಾಯಕನ ಹಣಕ್ಕೆ ತಕ್ಕಂತೆ ಗಾತ್ರ ಹೊಂದಿಕೊಂಡು ಹಳ್ಳಿಯಲ್ಲಿ ನಾಲ್ಕು ಭಾಗಗಳಾಗಿ, ನಮ್ಮ ಗ್ರಾಮೀಣ ಐಕ್ಯತೆಯನ್ನು ನಾಶ ಮಾಡುತ್ತದೆ. ಇದೇ ರೀತಿ ನಗರ ಪ್ರದೇಶಗಳಲ್ಲೂ ಗುಂಪುಗಾರಿಕೆಗೆ ಕುಮಕು ಕೊಟ್ಟು ಪ್ರಾದೇಶಿಕ ಐಕ್ಯತೆಯನ್ನು ಹಾಳು ಮಾಡುತ್ತಾ, ಜನರನ್ನು ಸ್ವಾಭಿಮಾನ ಹೀನರನ್ನಾಗಿ ಮಾಡಿ ಭಕ್ತಿಯನ್ನು ಹಣದಿಂದ ಅಳೆಯುವ ಸಾಂಸ್ಕೃತಿಕ ಹಿನ್ನೆಲೆಯ ಶಕ್ತಿಯುತ ಪರಂಪರೆಯ ಆಚರಣಗಳನ್ನು ಕೊಲ್ಲುವ ಒಂದು ತಂತ್ರಗಾರಿಕೆಯನ್ನು ನಮ್ಮ ನಮ್ಮಲ್ಲಿ ದ್ವಂದ್ವವನ್ನು ಎಬ್ಬಿಸಿ, ಮುಂದೊಂದು ದಿನ ನಮ್ಮ ರಾಷ್ಟ್ರೀಯ ಐಕ್ಯತೆಗೂ ಧಕ್ಕೆ ಬರುವಂತಹ ಪರಿಸ್ಥಿತಿ ನಿರ್ವಾಣ ವಾಗುವ ಸಾಧ್ಯತೆಗಳನ್ನು ಹೆಚ್ಚಿಸಲು, ಪೂರಕವಾಗುವಂತಹ ವಾತಾವರಣದ ಸೃಷ್ಟಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ಗೊಂಬೆಗಳು ಉತ್ತೇಜಕಗಳಾಗಿವೆ.
ನಮ್ಮ ನೈಜ ಪ್ರಾಕೃತಿಕ ಜೀವನಶೈಲಿಯಲ್ಲಿ, ಇಂದು ಶ್ರಮವಿಲ್ಲದೆ ಬದುಕುವ ಪ್ರಕೃತಿಯನ್ನು ಹಾಳು ಮಾಡುವ ಹಾಗೂ ಎಲ್ಲಕ್ಕಿಂತ ನಮ್ಮ ರಾಷ್ಟ್ರೀಯ ಐಕ್ಯತೆಗೆ ಮುಂದೊಂದು ದಿನ ಧಕ್ಕೆಯನ್ನು ಉಂಟುಮಾಡುವ POP ಗಣೇಶನ ಗೊಂಬೆಗಳನ್ನು ನಿಜವಾದ ಭಾರತೀಯರು ಸ್ವಯಂ ತಮಗೆ ತಾವೇ ನಿಷೇಧಿಸಬೇಕು ಹಾಗೂ ಅನ್ಯಧರ್ಮಿಗಳಾದ ನಮ್ಮ ದೇಶದ ನಮ್ಮ ಸಹೋದರ ಸಹೋದರಿ ಇಂತಹ ಧರ್ಮ ದ್ರೋಹಗಳನ್ನು ಖಂಡಿಸಬೇಕು, ಸ್ವಾರ್ಥ ಭರಿತ ಹಾಗೂ ರಾಷ್ಟ್ರ ದ್ರೋಹಿ ಪ್ರಕೃತಿದ್ರೋಹಿ ಸಾಂಪ್ರದಾಯದ್ರೋಹಿ ವ್ಯಾಪಾರಿಕರಣವನ್ನು ನಾವು ಎಂದಿಗೂ ಪ್ರೋತ್ಸಾಹಿಸಬಾರದು.
ನಮ್ಮ ಧರ್ಮದ ಬಗ್ಗೆ ಕನಿಷ್ಠ ಅಭಿಮಾನವಿದ್ದರೂ, ನೀವು ಮಣ್ಣಿನ ಗಣಪನನ್ನು ಪೂಜೆ ಮಾಡದೇ ಇದ್ದರೂ ಪರವಾಗಿಲ್ಲ ಆದರೆ ನಮ್ಮ ಪರಂಪರಾಗತ ಸನಾತನ ಧರ್ಮವನ್ನು ಹಾಳು ಮಾಡುವ POP ಗಣೇಶನ ಗೊಂಬೆಗಳನ್ನು ಪ್ರೋತ್ಸಾಹಿಸಬೇಡಿ.
ಸರಿಯಾದ ಪದ್ಧತಿಯಲ್ಲಿ ಮಾಡದ ಅಡುಗೆಯೂ ವಿಷವಾಗುತ್ತದೆ, ಪದ್ಧತಿ ಇಲ್ಲದ ಆಚರಣೆ ಗಣೇಶನ ಶಾಪಕ್ಕೆ ತುತ್ತಾಗುವುದರಲ್ಲಿ ಸಂಶಯವೇ ಇಲ್ಲ.
ಒಂದು ವೇಳೆ ಆಚರಣೆಗೆ ಶಕ್ತಿ ಇಲ್ಲದಿದ್ದರೆ, ಎಲ್ಲಕ್ಕಿಂತಲೂ ಶ್ರೇಷ್ಠವಾದ ಭಕ್ತಿಭಾವ ಸಮರ್ಪಣೆಯನ್ನು ಮಾಡಿ, ಯಾವ ಕಾರಣಕ್ಕೂ ಪ್ಲಾಸ್ಟಿಕ್ ಬೊಂಬೆಗಳನ್ನು , ಅದರಲ್ಲೂ ಪ್ರಕೃತಿಗೆ ವಿಷಯವನ್ನು ಉಣಿಸುವ ಗೊಂಬೆಗಳನ್ನು ಗಣೇಶನಿಗೆ ಹೋಲಿಸಿ ಗಣೇಶನ ಶಾಪಕ್ಕೆ ಗುರಿಯಾಗಬೇಡಿ.
Integrity
Promoting ethical journalism for Mulbagal community.
News
Updates
+91-9480563131
© 2024. All rights reserved.