ಸೇವಾ ಸಂಸ್ಥೆಗಳಿಂದ ಸಮಾಜಕ್ಕೆ ಅನುಕೂಲಗಳನ್ನು ಮಾಡುವುದು ಬಹಳ ಹೆಮ್ಮೆಯ ವಿಷಯ ಎಂದು ತಿಳಿಯುತ್ತೇವೆ?
ನಾವು ಬಹಳಷ್ಟು ಸಲ . ಒಂದು ರೀತಿಯಲ್ಲಿ ಅದು ಸರಿ ಹೌದು. ಆದರೆ ನಾವು ಮಾಡುವ ಅನುಕೂಲಗಳು ಸಮಾಜಕ್ಕೆ ಅನುಕೂಲವಾದರೂ ಸಹ, ಕೆಲವು ಸಂದರ್ಭಗಳಲ್ಲಿ ಇದೇ ಸಮಾಜವನ್ನು ಹಾಗೂ ಸಂವಿಧಾನವನ್ನು ದುರ್ನಡತೆಯಿಂದ ನಡೆಸಿಕೊಂಡು ಹೋಗುವವರ ಸೋಂಬೇರಿತನಕ್ಕೆ ಪುಷ್ಟೀಕರಣ ಮಾಡಿದಂತೆ ಆಗಬಹುದು ಎಚ್ಚರಿಕೆ!
MULBAGALSTATENEWS
Rohan kumar K
8/31/20241 min read


ನಾವು ಬಹಳಷ್ಟು ಸಲ ಸೇವಾ ಸಂಸ್ಥೆಗಳಿಂದ ಸಮಾಜಕ್ಕೆ ಅನುಕೂಲಗಳನ್ನು ಮಾಡುವುದು ಬಹಳ ಹೆಮ್ಮೆಯ ವಿಷಯ ಎಂದು ತಿಳಿಯುತ್ತೇವೆ. ಒಂದು ರೀತಿಯಲ್ಲಿ ಅದು ಸರಿ ಹೌದು. ಆದರೆ ನಾವು ಮಾಡುವ ಅನುಕೂಲಗಳು ಸಮಾಜಕ್ಕೆ ಅನುಕೂಲವಾದರೂ ಸಹ, ಕೆಲವು ಸಂದರ್ಭಗಳಲ್ಲಿ ಇದೇ ಸಮಾಜವನ್ನು ಹಾಗೂ ಸಂವಿಧಾನವನ್ನು ದುರ್ನಡತೆಯಿಂದ ನಡೆಸಿಕೊಂಡು ಹೋಗುವವರ ಸೋಂಬೇರಿತನಕ್ಕೆ ಪುಷ್ಟೀಕರಣ ಮಾಡಿದಂತೆ ಆಗಬಹುದು ಎಚ್ಚರಿಕೆ!
ಒಂದು ಬಾರಿ ನಾವು ಸರ್ಕಾರಿ ಶಾಲೆಗಳಲ್ಲಿ ಅಥವಾ ಸರ್ಕಾರಿ ಸೌಮ್ಯದ ಕಟ್ಟಡಗಳಲ್ಲಿ ಮತ್ತು ಖಚಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ನೋಡ ಬಯಸುವುದಾದರೆ, ಪಂಚಾಯತಿ ಕಟ್ಟಡಗಳು ಮತ್ತು ತಾಲೂಕು ಆಡಳಿತ ಕಟ್ಟಡಗಳು ಇನ್ನೂ ಅನೇಕ, ಕೆಲವೊಮ್ಮೆ ಶಾಲಾ ಕಟ್ಟಡಗಳೇ ಅಲ್ಲದೆ ಶೌಚಾಲಯ ವ್ಯವಸ್ಥೆಯು ಸೇರಿದಂತೆ, ಮೂಲಭೂತ ಸೌಕರ್ಯಗಳು ಅಲ್ಲದೆ, ಸಾಮಾನ್ಯ ಪರಿಶೀಲನೆಯಿಂದ ಮನವರಕೆಯಾಗುವಷ್ಟು ಕಣ್ಣಿಗೆ ಕಾಣುವಂತಹ ನಿರ್ವಹಣಾ ಲೋಪ ಮತ್ತು ಕಳಪೆ ಕಾಮಗಾರಿ ಎದ್ದು ಕಾಣುತ್ತದೆ...
ಹೀಗೆ ಒಮ್ಮೆ ಯೋಚಿಸಿ- ಸರ್ಕಾರಿ ಸೇವೆಯಲ್ಲಿ ಜವಾಬ್ದಾರಿ ವಹಿಸಬೇಕಾದ ಕಾರ್ಯಾಂಗವು ಒಮ್ಮೊಮ್ಮೆ ಅತಿ ಭ್ರಷ್ಟತನದಿಂದ, ಕೆಲವು ಕಾಂಟ್ರಾಕ್ಟರ್ ಗಳನ್ನು ಸೇರಿಕೊಂಡು ರಾಷ್ಟ್ರಧ್ರೋಹದ ಹಾದಿ ಹಿಡಿಯುವುದು ತಮ್ಮ ವ್ಯಾಪ್ತಿಯ ಕಳಪೆ ಮಟ್ಟದ ಕಟ್ಟಡ ಅಥವಾ ಯಾವುದೇ ಕಾಮಗಾರಿ ಸಾಮಾನ್ಯವಾಗಿ ಕಣ್ಣಿಗೆ ಕಾಣುವಂತೆ ನೋಡಿದಾಗ ತಿಳಿಯುತ್ತದೆ, ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ಒಳಿತಿಗಾಗಿ ಸಮಾಜದಲ್ಲಿ ಒಳ್ಳೆಯ ಚಟುವಟಿಕೆ ಎಂಬಂತೆ, ಇಂತಹ ಎಲ್ಲಾ ಕಟ್ಟಡಗಳು, ಶೌಚಾಲಯಗಳು, ಕಾಮಗಾರಿಗಳು ಎಲ್ಲವನ್ನು ಸೇವಾ ಸಂಸ್ಥೆಗಳ ವಲಯವಾದ ಅನೇಕ ಸಂಘ ಸಂಸ್ಥೆಗಳು ಇರಬಹುದು ಅಥವಾ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ರೋಟರಿ ಸಂಸ್ಥೆಗಳೇ ಇರಬಹುದು, ಇಂತಹ ಕ್ಷೇತ್ರಗಳಲ್ಲಿ ಕಳೆಗುಂದಿದ ಮತ್ತು ಕಳಪೆ ವ್ಯವಸ್ಥೆಯನ್ನು ಸರಿಮಾಡಿ ಸಾರ್ವಜನಿಕರ ಮುಂದೆ ಸಮಾಜಮುಖಿಯಾಗಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ತಿಳಿಸುತ್ತಾ ಹೋದಾಗ... ನಮ್ಮ ರಾಷ್ಟ್ರದ ಗತಿ ಏನಾಗುತ್ತದೆ ಎಂದು ಒಮ್ಮೆ ಯೋಚನೆ ಮಾಡಿ? ಇದು ಸಂದರ್ಭಕ್ಕೆ ಜ್ಞಾನಾನುಸಾರ ಯೋಚನೆ ಮಾಡಬೇಕಾದಂತಹ ವಿಷಯ ಆದ್ದರಿಂದ, ಏಕಕೋನ ಮನಸ್ಥಿತಿಯಿಂದ ಆಲೋಚನೆ ಮಾಡುವುದನ್ನು ಬಿಟ್ಟು, ಬಲಿಷ್ಠ ಭವ್ಯ ಭಾರತ ದೇಶದ ಮುಂದಿನ ಪೀಳಿಗೆಯ ಭವಿಷ್ಯದ ಕಲ್ಪನೆಯೊಂದಿಗೆ ಯೋಚಿಸಿ.
ಸಂಘ ಸಂಸ್ಥೆಗಳು ಮತ್ತು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಉನ್ನತ ಮಟ್ಟದ ಸೇವಾ ಸಂಸ್ಕೃತಿ ಮತ್ತು ಆಚರಣೆಗಳಿಂದ ಸಂತುಷ್ಟರಾಗಿ ಇಂತಹ ಸಂಸ್ಥೆಗಳನ್ನು ಸನ್ಮಾನಿಸಿ ಮುದ್ರಣೀಕರಿಸಿ ಗೌರವಿಸಿ ಬೆನ್ನು ತಟ್ಟುತ್ತಿರುವ ಅದೆಷ್ಟೋ ಅನೇಕ ಕಾರ್ಯಾಂಗ ವ್ಯವಸ್ಥೆಯ ಉನ್ನತ ಮತ್ತು ಅತ್ಯುನ್ನತ ಶ್ರೇಣಿಯ ನಾಗರೀಕ ಸಾರ್ವಭೌಮತ್ವದ ದೇಶದ ನಾಗರಿಕ ಸೇವಕರುಗಳು, ತಮ್ಮ ಬುದ್ಧಿವಂತಿಕೆಯಿಂದ ತಮ್ಮ ಕರ್ತವ್ಯ ಲೋಕಗಳನ್ನು ಮುಚ್ಚಿಕೊಳ್ಳುತ್ತಾರೆ ಹಾಗೂ ಸಂಘ-ಸಂಸ್ಥೆಗಳನ್ನು ಗೌರವಿಸಿ ಮನೆಗೆ ಕಳುಹಿಸುತ್ತಾರೆ ಹೊರತು, ಸರ್ಕಾರಿ ವ್ಯವಸ್ಥೆಯ ಕಟ್ಟಡ ಮತ್ತು ಶಾಲಾ-ಕಾಲೇಜುಗಳಲ್ಲಿನ ನಿರ್ವಹಣಾ ಲೋಪ ಮತ್ತು ಕಳಪೆ ಕಾಮಗಾರಿಗಳ ವಿಚಾರವಾಗಿ ಎಲ್ಲಿಯೂ ಜಾಗೃತಗೊಂಡು ಮುಂದೆ ಹೀಗಾಗದಂತೆ ನಡೆದುಕೊಳ್ಳುತ್ತೇವೆ ಎಂದು ಒಪ್ಪಿಕೊಳ್ಳುವುದಿಲ್ಲ, ಅಥವಾ ಕ್ಷಮೆ ಕೇಳುವುದಿಲ್ಲ. ಬದಲಿಗೆ ಮತ್ತಷ್ಟು ಪುಷ್ಟಿಕರಣ ಸಿಕ್ಕಿದಂತೆ ಕಳಪೆ ಕಾಮಗಾರಿಗಳನ್ನು ಮುಂದುವರಿಸುತ್ತಾ ಸೋಂಬೇರಿತನವನ್ನು ಮೈಗೂಡಿಸಿಕೊಂಡು ಪ್ರಜಾ ಸೇವಕರು ಎಂಬ ಭಾವನೆಯನ್ನು ಮರೆತು, ಪ್ರಜೆಗಳ ಶ್ರಮದ ಬೆವರಿನಿಂದ ರಾಷ್ಟ್ರದ ಭವ್ಯತೆಗೆ ಬರುವ ತೆರಿಗೆ ಹಣದಿಂದ ಪಡೆಯುವ ಸಂಬಳವನ್ನು ಗೌರವಿಸದೆ ಇದೇ ಪ್ರಜೆಗಳ ಮೇಲೆ ದರ್ಪ ತೋರಿಸಿ ಅಧಿಕಾರಿಗಳು ಎಂಬ ಪಟ್ಟಿ ಕಟ್ಟಿಕೊಂಡು, ಎಷ್ಟೇ ತಿಂದು ತೇಗಿದರು ಸಮಾಜದಲ್ಲಿ ಸಂಘ ಸಂಸ್ಥೆಗಳು ಎಂಬ ಕುರಿಗಳು ಬರಿಯ ಸುತ್ತಮುತ್ತಲಿಗೆ ಸೀಮಿತವಲ್ಲದೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಇದ್ದಾರೆ ಎಂದು ಸಂತೋಷದಿಂದ ಮತ್ತಷ್ಟು ಭ್ರಷ್ಟರಾಗುವ ಸಾಧ್ಯತೆಗಳು ಹೆಚ್ಚು ಎಂಬುವುದು ಒಂದು ರೀತಿಯ ಆಲೋಚನೆ ಯಾಕೆ ಆಗಬಾರದು?
ಒಬ್ಬ ಮಹನೀಯರು ಆಲೋಚಿಸಿ ಹೇಳುತ್ತಾರೆ " a fools charity is enough to ruin an entire ethical empire " ಅಂದರೆ " ಒಬ್ಬ ಮೂರ್ಖನ ದಾನವು ಇಡೀ ನೈತಿಕ ಸಾಮ್ರಾಜ್ಯವನ್ನು ಹಾಳುಮಾಡಲು ಸಾಕು " ಎಂದು ಶ್ರೀ ಅಂತರ ಗಂಗಾಧರನಾಥ ಸ್ವಾಮೀಜಿ ರವರು ಹೇಳುತ್ತಿರುತ್ತಾರೆ, ಇದು ಎಷ್ಟು ಮಾತ್ರ ಸರಿ ಎಂದು ಪ್ರತಿಯೊಬ್ಬರು ಅವಲೋಕಿಸಬೇಕು.
ಶ್ರೀ ಅಂತರಗಂಗಾಧರನಾಥ ಸ್ವಾಮೀಜಿ ರವರು ಹೇಳುವಂತೆ ಈ ಹಿಂದೆ ಮಹನೀಯರೊಬ್ಬರು, ಸರ್ವರಿಗೂ ಒಳ್ಳೆಯದಾಗಲಿ ಎಂದು, ಒಂದು ನಿರ್ದಿಷ್ಟ ಅವಧಿಗೆ, ಬಡತನದ ಅವಧಿಯ ವ್ಯಾಪ್ತಿಗೆ ಬರುವಂತಹ ಜನರನ್ನು ಗುರುತಿಸಿ. ಅವರ ಒಂದು ಪೀಳಿಗೆಯ ಭವಿಷ್ಯದ ನಿರ್ಮಾಣಕ್ಕೆ ಆಗುವಷ್ಟು ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿ ಅವರ ಪೀಳಿಗೆಯ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ ಪ್ರೋತ್ಸಾಹಿಸಿ, ಒಂದು ದಿನ ಗತಿಸುತ್ತಾರೆ. ಈ ಒಂದು ಚಟುವಟಿಕೆಯಿಂದ ಮಹನೀಯರ ಆಲೋಚನೆಯಂತೆ ಒಂದು ಬಡತನದ ಅವಧಿಯ ವ್ಯಾಪ್ತಿಗೆ ಬರುವ ಹೆಚ್ಚಿನ ಮಂದಿ ಮತ್ತೊಬ್ಬರಿಗೆ ಅನ್ನ ಕೊಡುವಷ್ಟು ಸಮಾಜದಲ್ಲಿ ಬೆಳೆಯುತ್ತಾರೆ, ಹೀಗಿರುವಾಗ ಮಹನೀಯರ ನಂತರ ಬಂದ ಅನುಯಾಯಿಯು, ಮಹನೀಯರು ಕೊಟ್ಟಿದ್ದ ಅವಧಿಯನ್ನು ಮೀರಿಸಿ ಅನುಕಂಪದ ಮತ್ತು ಅತಿ ವ್ಯಾಮೋಹಕ್ಕೆ ಒಳಗಾಗಿ ದಾಸೋಹ ವ್ಯವಸ್ಥೆಯನ್ನು ಅವಶ್ಯಕತೆಗೆ ನೀಡಿ ಮುನ್ನಡೆಸುತ್ತಾನೆ. ಇದರ ಪರಿಣಾಮವಾಗಿ ಕಷ್ಟಗಳನ್ನು ನೋಡಿ ಬೆಳೆದು ಪ್ರತಿಯೊಬ್ಬರು ಶ್ರೇಷ್ಠವಾದಂತ ಜ್ಞಾನವನ್ನು ಪಡೆದು ಬಲಿಷ್ಠವಾಗಿ ಬೆಳೆಯಬೇಕಿದ್ದ ಎಲ್ಲಾ ಪ್ರೋತ್ಸಾಹಿತರು, ಬರ ಬರುತ್ತಾ ಸೋಂಬೇರಿಗಳಾಗುತ್ತಾರೆ, ಏಕೆಂದರೆ? ಒಂದು ಕಾಲದಲ್ಲಿ ಅನ್ನವು ಅವರಿಗೆ ಅವಶ್ಯಕತೆವಾಗಿ ಇತ್ತು ಹಾಗೂ ಅಂತಹ ಸಂದರ್ಭದಲ್ಲಿ ಜ್ಞಾನಪೂರ್ವಕ ಸಾಮರಸ್ಯ ವ್ಯವಸ್ಥೆಯ ಸೌಲಭ್ಯ ದೊರೆತು ಮುನ್ನಡೆದ ಜನರು, ಇಂದು ದಾಸೋಹ ವ್ಯವಸ್ಥೆಯನ್ನು ಸೇವೆ ಎಂಬ ಭಾವನೆಯಿಂದ ಮುಂದುವರೆದು, ದಾನ ಎಂಬ ಪದದಂತೆ ಸ್ವೀಕರಿಸುತ್ತಾ ಮತ್ತೊಮ್ಮೆ ಹಿಂದಿನ ಪರಿಸ್ಥಿತಿ ಇದ್ದಂತೆ ಮರು ಅನುಷ್ಠಾನೀತರಾಗುತ್ತಾರೆ... ಹಾಗಾದರೆ ಅವಶ್ಯಕತೆ ಇದೆ ಎಂದ ಮಾತ್ರಕ್ಕೆ ದಾಸೋಹ ವ್ಯವಸ್ಥೆಯನ್ನು ನೀಡಿದ ಪರಿಣಾಮ... ಪ್ರಯೋಜನಕಾರಿಯಾಯಿತು ಅಥವಾ ನಿಷ್ಪ್ರಯೋಜಕವಾಯಿತು ಎಂದು ಪ್ರತಿಯೊಬ್ಬರು ವಿಮರ್ಶಿಸಿಕೊಳ್ಳಬೇಕು.
" ಕಾಲಾಯ ತಸ್ಮೈ ನಮಃ ಎಂಬಂತೆ " ಯಾರೇ ಆಗಲಿ, ಹಿಂದಿನ ಪರಿಸ್ಥಿತಿಗಳನ್ನು ತಿಳಿದುಕೊಂಡು ಪ್ರಸಕ್ತ ವಿಮರ್ಶಿಸಿ ಬಹಳಷ್ಟು ಮುಂದಾಲೋಚನೆಯಿಂದ ನಿರ್ಧಾರಗಳನ್ನು ತೆಗೆದುಕೊಂಡಾಗ ಮಾತ್ರ ಕಲಿಯುಗದಲ್ಲಿ ಸೇವೆ ಎಂಬ ಮಾತಿಗೆ ನ್ಯಾಯ ದೊರಕಿಸಿ ಕೊಟ್ಟಂತೆ ಆಗುತ್ತದೆ ಹಾಗೂ ನಿಜವಾದ ಕರ್ಮ ಅದೇ ಎಂದು ಮುಂದಿನ ಪೀಳಿಗೆಗೆ ಜ್ಞಾನಪ್ರಕಾಶವಾಗಿ ಪ್ರವಹಿಸುತ್ತದೆ.
ಇಷ್ಟೆಲ್ಲ ವಿಮರ್ಶಗಳನ್ನು ಅವಲೋಕಿಸಿ ನೋಡಿದಾಗ, ನಮ್ಮ ಅನಿಸಿಕೆ ಏನೆಂದರೆ? ನಾವು ಸಮಾಜ ಸೇವೆ ಮಾಡುವುದಕ್ಕಿಂತಲೂ ಹೆಚ್ಚಿನ ಶಕ್ತಿಯನ್ನು, ಪ್ರಸಕ್ತ ಕಾಲಮಾನಕ್ಕೆ ಸರಿದೂಗುವಂತೆ ಅವಲೋಕಿಸಿ, ಒಂದು ವ್ಯವಸ್ಥೆಯನ್ನು ತಿದ್ದಲು ಅಥವಾ ಸರಿ ಮಾಡಲು ಅದೇ ವ್ಯವಸ್ಥೆಯಲ್ಲಿನ ನಾಗರಿಕರಿಗೆ ಮಾರ್ಗದರ್ಶಿಸಿ ಮುನ್ನಡೆಸಲು ನಿಲ್ಲಬೇಕು, ಅದೇ ರೀತಿ ಸರ್ಕಾರಿ ವ್ಯಾಪ್ತಿಗೆ ಬರುವ ಕಟ್ಟಡ ಕಾಮಗಾರಿಗಳು ಇರಲಿ ಅಥವಾ ಶಾಲೆಯೇ ಇರಲಿ ಶೌಚಾಲಯ ಇರಲಿ, ನಾವೇ ನಿಂತು ಸರಿಪಡಿಸುವ ಜವಾಬ್ದಾರಿಯನ್ನು ವಹಿಸುವುದೇ ಅಲ್ಲದೆ, ಅದಕ್ಕಿಂತಲೂ ಉನ್ನತವಾಗಿ ಅವಲೋಕಿಸಿ ಅದಕ್ಕೆ ಪೂರಕವೆಂಬಂತೆ, ಇಂತಹ ಪರಿಸ್ಥಿತಿಗಳು ಕಂಡು ಬಂದಲ್ಲಿ, ಅದಕ್ಕೆ ಕಾರಣರಾದ ವ್ಯವಸ್ಥೆಯ ಮೇಲೆ ಮತ್ತು ಅಂತಹ ವಿಚಾರಗಳಲ್ಲಿನ ಭ್ರಷ್ಟಾಚಾರದ ಮೇಲೆ ಏಕೆ ಬೆಳಕನ್ನು ಚೆಲ್ಲಬಾರದು? ಅಥವಾ ಇದನ್ನೇ ಮಾದರಿಯನ್ನಾಗಿಸಿ, ಅಲ್ಲಿನ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ನಾಗರಿಕರಿಗೆ ಇಂತಹ ವಿಚಾರಗಳ ಜ್ಞಾನವನ್ನು ಹಂಚಿ ಅವರಿಂದಲೇ ಏಕೆ ಅವರ ಸಮಸ್ಯೆಯನ್ನು ಬಗೆಹರಿಸುವ ಶಕ್ತಿಯನ್ನು ನಾವು ಕೊಡಬಾರದು?
ಒಟ್ಟಿನಲ್ಲಿ ಯಾವುದು ಏನೇ ಇರಲಿ... ಮೇಲಿನ ಎಲ್ಲ ವಿಷಯಗಳು ಬರೀ ವಿಮರ್ಶೆಗೆ ಮಾತ್ರ ಸೀಮಿತ ಹಾಗೂ ಮತ್ತೊಮ್ಮೆ ಹೇಳುವುದಾದರೆ- ದೇಶವನ್ನು ಡಕಾಯಿತರು ಕೊಳ್ಳೆ ಹೊಡೆಯಲಿ, ಆದರೆ ನಮ್ಮ ಮನೆಗೆ ಮಾತ್ರ ಹೆಗ್ಗಣ ಬಾರದಿರಲಿ... ಎಲ್ಲರಿಗೂ ಶುಭವಾಗಲಿ.
Integrity
Promoting ethical journalism for Mulbagal community.
News
Updates
+91-9480563131
© 2024. All rights reserved.