ಬಲಿಷ್ಠ ಭಾರತ ನಿರ್ಮಾಣ: ರಾಷ್ಟ್ರೀಯ ಮೌಲ್ಯಗಳು, ಯುವಜನರ ಜಾಗೃತಿ ಮತ್ತು ಏಕತೆಯ ಪಥ

ಭಾರತದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳು ನಮ್ಮ ಸಂವಿಧಾನದ ಆಧಾರಶಿಲೆಗಳಾಗಿವೆ. ಆದರೆ ಇಂದಿನ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದೆ. ಯುವಜನತೆ ರಾಷ್ಟ್ರದ ಭವಿಷ್ಯವಾಗಿದ್ದು, ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ, ಯೋಗಿ ನಾರಾಯಣ ಮತ್ತು ಕೆಂಪೇಗೌಡರ ಜಯಂತಿಗಳನ್ನು ಸಮಾನತೆಯಿಂದ ಆಚರಿಸುವ ಮೂಲಕ, ಸಾಮರಸ್ಯ ಮತ್ತು ಏಕತೆಯನ್ನು ಬೆಳೆಸಬಹುದು. ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಮುಂದಾಗಬೇಕು.

NATIONALMULBAGALSTATENEWS

Rohan kumar K

4/6/20251 min read

ಬಲಿಷ್ಠ ಭಾರತ ನಿರ್ಮಾಣ: ರಾಷ್ಟ್ರೀಯ ಮೌಲ್ಯಗಳು, ಯುವಜನರ ಜಾಗೃತಿ ಮತ್ತು ಏಕತೆಯ ಪಥ

ನಮ್ಮ ಹಿಂದಿನ ಸ್ವತಂತ್ರಕ್ಕೆ ಅಂದಿನ ಹೋರಾಟಗಾರರ ಮತ್ತು ಸ್ವಾಭಿಮಾನಿಗಳ ಬೆಲೆಕಟ್ಟಲಾಗದಂತಹ ತ್ಯಾಗ ಬಲಿದಾನವೇ ಮೂಲ ನಂತರದ ಆಡಳಿತ ವ್ಯವಸ್ಥೆಗೆ ಪಣತೊಟ್ಟಂತಹ ನಾಯಕ ಸ್ಥಾನದ ನಾಯಕತ್ವದ ಗುಣಗಳುಳ್ಳ ರಾಷ್ಟ್ರೀಯ ಮೌಲ್ಯಗಳ ಆಧಾರಿತ ಅರ್ಹ ನಾಯಕರುಗಳು ನಮ್ಮ ಭಾರತ ದೇಶದ ಸಂವಿಧಾನದಲ್ಲಿ ಬಹಳ ವೈಚಾರಿಕತೆಯಿಂದ ನಮ್ಮೆಲ್ಲರನ್ನು ಸದೃಢರನ್ನಾಗಿಸಲು ನೀತಿ ನಿಯಮಗಳನ್ನು ನೀಡಿ ನಮಗಾಗಿ ತಮ್ಮ ಸರ್ವಸ್ವವನ್ನು ನೀಡಿರುತ್ತಾರೆ.

ಆದರೆ ವಿಪರ್ಯಾಸ ಎಂದರೆ ಬಲಿಷ್ಠ ಭಾರತದ ಸದೃಢ ನಿರ್ಮಾಣಕ್ಕಾಗಿ ಯುವ ಜನತೆಯನ್ನು ಮುನ್ನಡೆಸಬೇಕಿದ್ದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ತದ್ವಿರುದ್ಧವಾಗಿ ಸಮಾಜವನ್ನು ದಿಕ್ಕು ತಪ್ಪಿಸಿ ಜನಸಾಮಾನ್ಯರನ್ನು ಯಾವುದೇ ಮಟ್ಟದಲ್ಲಿ ಶಾಸಕಾಂಗ ವ್ಯವಸ್ಥೆಯ ಅರಿವನ್ನು ಮೂಡಿಸದೆ ದೂರವಿಟ್ಟು. ಆಡಳಿತದ ಮುಖ್ಯ ನ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಿ ರಾಷ್ಟ್ರ ದ್ರೋಹ ಮಾಡುತ್ತಿರುವ ಅದಿಷ್ಟೋ ಮಂದಿ ದ್ರೋಹಿಗಳು ಇನ್ನು ನಮ್ಮ ಅಕ್ಕಪಕ್ಕದಲ್ಲೇ ಇರುವುದು ನಮ್ಮ ದುರ್ದೈವ.

ರಾಷ್ಟ್ರೀಯ ಐಕ್ಯತೆಯನ್ನು ಕಟ್ಟುನಿಟ್ಟಾಗಿ ರಾಷ್ಟ್ರೀಯ ಮೌಲ್ಯಗಳ ಆಧಾರದ ಮೇಲೆ ಏಕತೆಯನ್ನು ಬೆಳೆಸಲು ರಾಷ್ಟ್ರೀಯ ಹಬ್ಬಗಳನ್ನು ನಮಗಾಗಿ ರೂಪಿಸಲಾಯಿತು ಆದರೆ ಇಂದು ಅದೇ ಹಬ್ಬಗಳಲ್ಲಿ ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವಾದ ಪ್ರಜೆಯನ್ನೇ ಕಡೆಗಣಿಸಿ ಅಧಿಕಾರ ಶಾಹಿತನದ ಬ್ರಿಟಿಷರಂತೆ ಜನರನ್ನು ನಡೆಸಿಕೊಳ್ಳುತ್ತಿರುವುದು ಬಹಳ ಯೋಚನೆ, ಇದಕ್ಕೆ ಪೂರಕವೆಂಬಂತೆ ಶಾಸಕಾಂಗದ ವ್ಯವಸ್ಥೆಯಲ್ಲಿ ಹಿಂದೆ ರಾಜವಂಶಸ್ಥರು ತಮ್ಮ ರಾಜ್ಯವನ್ನು ತಮ್ಮ ವಂಶದವರಿಗೆ ನಡೆಸಿಕೊಂಡು ಹೋಗುವಂತೆ ಇಂದಿಗೂ ಸಹ ಪ್ರಜಾತಂತ್ರದಲ್ಲಿ ಚುನಾಯಿತರಾದ ಅದೆಷ್ಟೋ ಹೆಚ್ಚಿನ ಮಂದಿ ತಮ್ಮ ವಂಶ ಮತ್ತು ತಮ್ಮ ಮಕ್ಕಳ ಉದ್ದಾರಕ್ಕಾಗಿ ಸಂವಿಧಾನವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದ್ರೋಹದ ವಿಷಯವಾದರೂ ಹೆಚ್ಚು ಮಂದಿ ಮುಟ್ಟಾಳರ ಮಧ್ಯೆ ಬುದ್ಧಿವಂತರು ಮೌನವಹಿಸಿರುವಂತೆ ಕಾಣುತ್ತಿರುವ ಸಮಾಜ, ನಿಜಕ್ಕೂ ವಿಷಾದನೀಯ.

ಈ ಮೂಲಕ ಯುವಜನತೆಯನ್ನು ಮತ್ತು ನಿಷ್ಠಾವಂತ ರಾಷ್ಟ್ರೀಯ ಮೌಲ್ಯಗಳು ಮತ್ತು ಸಾಮರಸ್ಯ ಮನೋಭಾವವನ್ನು ರಾಷ್ಟ್ರಧರ್ಮದ ಶಕ್ತಿಯೊಂದಿಗೆ ಚಿಂತಿಸುವ ಹೆಮ್ಮೆಯ ಭಾರತೀಯರಿಗೆ ಜಾಗೃತ ವಹಿಸುತ್ತಿರುವ ವಿಷಯವೇನೆಂದರೆ, ಪ್ರಸಕ್ತ ಅತಿ ಹೆಚ್ಚು ಜಯಂತಿಗಳು ನಮ್ಮ ರಾಜ್ಯದಲ್ಲಿ ತಲೆ ಎತ್ತಿವೆ,. ನಮ್ಮ ಹಿರಿಯರನ್ನು ನೆನೆಸಿಕೊಂಡು ಅವರು ನಮಗಾಗಿ ಕೊಟ್ಟ ಸಮಯವನ್ನು ಗೌರವಿಸಿ, ಆ ದಿನದಂದು ನಮ್ಮ ಸಮಯವನ್ನು ಭಾರತದ ಶ್ರೇಷ್ಠತೆಯ ಸೇವೆಯಲ್ಲಿ ಸಾರ್ಥಕತೆಯಿಂದ ನಡೆಸಿಕೊಳ್ಳುವುದು ಬಹಳ ಸೂಕ್ತ, ಉಳಿದಂತೆ ಸಾಮರಸ್ಯ ಮತ್ತು ಐಕ್ಯತೆಯನ್ನು ಮತ್ತು ಅನೇಕತೆಯಲ್ಲಿ ಏಕತೆಯನ್ನು ಸಾರುವ ಉದ್ದೇಶದಿಂದ ಬುದ್ಧ ಬಸವ ಅಂಬೇಡ್ಕರ್ ವಾಲ್ಮೀಕಿ ಯೋಗಿ ನಾರಾಯಣ ಹಾಗೂ ಕೆಂಪೇಗೌಡರ ಜಯಂತಿಗಳನ್ನು ಸಮಾಜದಲ್ಲಿ ನಾವೆಲ್ಲರೂ ಒಂದಾಗಿ ಸಂಭ್ರಮದಿಂದ ಆಚರಿಸಿ ನಾವೆಲ್ಲರೂ ಭಾರತೀಯರು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮತ್ತು ಪ್ರತಿ ಸಂಪ್ರದಾಯವನ್ನು ಶ್ರೇಷ್ಠವೆಂದು ಪರಿಗಣಿಸುವ ಪರಿಕಲ್ಪನೆ ಉಳ್ಳ ಸನಾತನೆಗಳೆಂದು ಹೆಮ್ಮೆಯಿಂದ ಹೇಳಲು ಮತ್ತು ಅಳವಡಿಸಿಕೊಳ್ಳಲು ನಮ್ಮ ಹಿರಿಯರು ಕೊಟ್ಟಿರುವ ಅವಕಾಶ ಮತ್ತು ಸ್ಪೂರ್ತಿಯಾಗಿದೆ, ಆದರೆ ಪ್ರಸಕ್ತ ಆಡಳಿತ ಮತ್ತು ಶಾಸಕಾಂಗ ವ್ಯವಸ್ಥೆಯ ಒಳಗಡೆ ಇರುವ ಅಯೋಗ್ಯ ಜನರಿಂದ ಜಾತಿ ಜಾತಿ ಮಧ್ಯ ವಿಭಜಿಸುವ ಯಂತ್ರವನ್ನಾಗಿ ಜಯಂತಿಗಳನ್ನು ಬಳಸಿಕೊಂಡು ಜನರಲ್ಲಿ ಅಸಹಿಷ್ನತೆಯನ್ನು ಉಂಟು ಮಾಡಿ ನಮ್ಮ ನಮ್ಮಲ್ಲೇ ವೈಶಮ್ಯಗಳನ್ನು ತುಂಬುವಂತಹ ಕುಟಿಲತೆಯನ್ನು ಮಾಡಿ ರಾಷ್ಟ್ರಧ್ರೋಹವನ್ನು ಮಾಡುತ್ತಿದ್ದೇವೆ ಎಂಬ ಕನಿಷ್ಠ ಮನಸ್ಸಾಕ್ಷಿ ಇಲ್ಲದೆ ಭಾರತೀಯರಿಗೆ ಮತ್ತು ಭಾರತಾಂಬೆಗೆ ಮೋಸ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಮೂಲಕ ಎಲ್ಲಾ ಭಾರತೀಯರಲ್ಲಿ ನಾವು ಕೇಳುವುದೇನೆಂದರೆ ದಯಮಾಡಿ ಈ ರೀತಿಯ ವಿಭಜಿತ ರಾಜಕೀಯ ತಂತ್ರಗಾರಿಕೆಯಲ್ಲಿ ಮಟ್ಟ ಹಾಕಲು ಎಲ್ಲರೂ ಕೈಜೋಡಿಸಿ ಎಲ್ಲಾ ತಾಲೂಕುಗಳಲ್ಲಿ ಮತ್ತು ಪಂಚಾಯಿತಿಗಳಲ್ಲಿ ಕಾರ್ಯಾಂಗದ ವ್ಯವಸ್ಥೆಯನ್ನು ಚುರುಕು ಮುಟ್ಟಿಸಿ ರಾಜ್ಯದ ಪ್ರತಿಯೊಂದು ಜಯಂತಿಗಳನ್ನು ನಮ್ಮದು ಎಂಬ ಭಾವನೆಯಲ್ಲಿ ಆಚರಿಸಿ ಯಾವುದೇ ರೀತಿಯ ಜಾತಿ ಮತ ಧರ್ಮ ಭೇದವಿಲ್ಲದೆ ಬಲಿಷ್ಠ ಭಾರತವನ್ನು ಕಟ್ಟಲು ಸಂಕಲ್ಪಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ. ಒಂದು ವೇಳೆ ಇಂತಹ ವ್ಯವಸ್ಥೆಯನ್ನು ನಾವೆಲ್ಲರೂ ಮಾಡದ ಪಕ್ಷದಲ್ಲಿ ಮುಂದೊಂದು ದಿನ ನಮ್ಮ ದೇಶ ಮೌಲ್ಯಗಳನ್ನು ಕಳೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ ಇದರಿಂದ ನಿಮ್ಮ ಮುಂದಿನ ಯುವ ಪೀಳಿಗೆಯ ಭವಿಷ್ಯಕ್ಕೆ ಒಳ್ಳೆಯ ವಾತಾವರಣವನ್ನು ಸೃಷ್ಟಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ ಎಂಬುದನ್ನು ಮರೆಯದಿರಿ.