ಮುಳಬಾಗಿಲು ತಾಲೂಕಿನಲ್ಲಿ ನಡೆಯುತ್ತಿರುವ ಕಾನೂನು ಸುವ್ಯವಸ್ಥೆಯ ಕಾರ್ಯಾಂಗ ವ್ಯವಸ್ಥೆಯ ಚಟುವಟಿಕೆಗಳು ಬಹಳ ಸ್ಲಾಘನೀಯ!

ಪ್ರಸಕ್ತ ರಾಜಕೀಯ ಹಾಗೂ ನಗರಕ್ಕೆ ಬೇಕಾಗಿರುವ ಪ್ರಮುಖ ವಿಷಯಗಳು ಮತ್ತು ನಮ್ಮ ಹೆಮ್ಮೆಯ ಪ್ರಜಾಪ್ರಭುತ್ವದ ನಿಜವಾದ ಪರಿಕಲ್ಪನೆಯ ಅನುಷ್ಠಾನಗೊಳಿಸುವ ಮೆಟ್ಟಿನಲ್ಲಿ ಹಲವಾರು ಚಿಂತನೆಗಳು ಮತ್ತು ಸಾಮಾಜಿಕ ಕಳಕಳಿಯ ವಿಷಯಗಳ ಒಂದಿಷ್ಟು ವಿಮರ್ಶೆ ಇದಾಗಿರುತ್ತದೆ

NATIONALMULBAGALSTATENEWS

Rohan kumar K from Strategy Based Resources and Facts

9/13/20241 min read

ಮುಳಬಾಗಿಲು ತಾಲೂಕಿನಲ್ಲಿ ನಡೆಯುತ್ತಿರುವ ಕಾನೂನು ಸುವ್ಯವಸ್ಥೆಯ ಕಾರ್ಯಾಂಗ ವ್ಯವಸ್ಥೆಯ ಚಟುವಟಿಕೆಗಳು ಬಹಳ ಸ್ಲಾಘನೀಯ, ಅದೇ ರೀತಿ ಕಾರ್ಯಾಂಗದಲ್ಲಿನ ನಗರಸಭೆ ವ್ಯಾಪ್ತಿಯ ಹಗರಣಗಳು ಬಹಳ ಎಳ್ಳೆ ಮೀರಿದ ಹಾಗೂ ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಸರ್ಕಾರಕ್ಕೆ ಆಗಿದೆ ಎಂಬುವ ವಾಸ್ತವದ ಗುಮಾನಿ ಎಲ್ಲೆಡೆ ಹರಡುತ್ತಿದೆ, ಈ ನಿಟ್ಟಿನಲ್ಲಿ ನಮ್ಮ ನೆಚ್ಚಿನ ಶಾಸಕರು ಯಾವ ರೀತಿಯ ಕ್ರಮ ತೆಗೆದುಕೊಂಡು ಪ್ರಸಕ್ತ ಹೆಗ್ಗಿಲ್ಲದೆ ನಡೆದಿರುವ ಹಗರಣವದಂತಹ E- ಖಾತೆ ಹಾಗೂ ನಗರ ವ್ಯಾಪ್ತಿಯ ಸರ್ಕಾರಿ ಜಮೀನುಗಳ ಕಬ್ಜಾ... ಇನ್ನು ಅನೇಕ ಗಮನ ಹರಿಸಲೇಬೇಕಾದ ಸಾಮಾಜಿಕ ಕಳಕಳಿಯ ವಿಷಯಗಳು ಶಾಸಕಾಂಗವು ಹೇಗೆ ನಿಭಾಯಿಸಿ ಕಾರ್ಯಾಂಗವನ್ನು ಪ್ರಬುದ್ಧರನ್ನಾಗಿಸುವ ನಿಟ್ಟಿನಲ್ಲಿ ಹಾಗೂ ನಾಗರೀಕರ ಹಿತ ಕಾಯುವಲ್ಲಿ ಚಾಕಚಕ್ಯತೆ ತೋರುತ್ತದೆ ಎಂಬ ವಿಚಾರವು ಬಹಳ ಸೂಕ್ಷ್ಮವಾಗಿ ತಾಲೂಕಿನ ಅತ್ಯಂತ ಕಟ್ಟ ಕಡೆಯ ಪ್ರಜೆಗೂ ವಿಮರ್ಶಾತ್ಮಕ ವಿಷಯವಾಗಿದೆ.

ಇನ್ನು ಈ ನಡುವೆ ತಾಲೂಕಿನ ಕಾರ್ಯಂಗಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಶಾಸಕಾಂಗದ ಪಾತ್ರ ಬಹಳ ಹೆಮ್ಮೆಯ ವಿಷಯವಾಗಿದೆ ಅಂತೆಯೇ ನಮ್ಮ ನೆಚ್ಚಿನ ಶಾಸಕರಾದ ಸಮೃದ್ಧಿ ವಿ ಮಂಜುನಾಥ್ ರವರು ತಮ್ಮ ಕಾರ್ಯಾಡಳಿತದಲ್ಲಿ ತಹಸಿಲ್ದಾರ್ ಒಬ್ಬರನ್ನು ಮೂರು ವರ್ಷ ಜೈಲು ಮತ್ತು ದಂಡದೊಂದಿಗೆ ಶಿಕ್ಷಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರ ವ್ಯವಸ್ಥೆಯನ್ನು ಹುಟ್ಟಡಗಿಸುವ ನ್ಯಾಯಾಂಗದ ತೀರ್ಪು ಬಂದಿರುವುದು ನಿಜಕ್ಕೂ ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ನಂಬಿಕೆ ತರುವಂತಹ ಮಹತ್ವದ ವಿಷಯವಾಗಿದೆ.

ಅಂತೆಯೇ ಮುಳಬಾಗಿಲು ತಾಲೂಕಿನ ಕಸಬಾ ಹೋಬಳಿಗೆ ಸಂಬಂಧಿಸಿದ ಅತಿ ಹೆಚ್ಚು ಭ್ರಷ್ಟಾಚಾರ ಒಂದರ ನಂತರ ಒಂದರಂತೆ ಬಯಲಿಗೆ ಬರುತ್ತಿರುವುದು ಶ್ಲಾಘನೀಯ, ಕೆಲವು ಕಡೆ ಸರ್ಕಾರಿ ಸೇವೆ ಮಾಡಬೇಕಾದ ತಾಲೂಕು ಕಚೇರಿಯ ಅಧಿಕಾರಿಗಳ ಭ್ರಷ್ಟಾಚಾರದ ಪ್ರಕರಣಗಳು ಬಹಳಷ್ಟು ಕಾಣುತ್ತಿದೆ ಅಂತೆಯೇ ಮುಳಬಾಗಿಲಿನಲ್ಲಿ ರೆವೆನ್ಯೂ ಸಂಬಂಧಿಸಿದ ಕಸಬಾ ಹೋಬಳಿಯ ಅನೇಕ ಜಮೀನುಗಳು ಮತ್ತು ಗೋಮಾಳ ಸರ್ಕಾರಿ ಕರಾಬು ಇಂತಹ ಸಾರ್ವಜನಿಕರ ಸರ್ಕಾರಿ ಸಂಪತ್ತನ್ನು ನುಂಗಿ ನೀರು ಕುಡಿದು ಕೋಟಿ ಕೋಟಿ ಹಣ ಗಳಿಸಿರುವ ಭ್ರಷ್ಟ ರಾಷ್ಟ್ರಧ್ರೋಹಿಗಳು ಸಮಾಜದ ಹಾಗೂ ರಾಷ್ಟ್ರದ ಭವಿಷ್ಯಕ್ಕೆ ಮಾರಕವಾಗಿ ಬೇರು ಬಿಟ್ಟಿರುವುದು ಬಹಳ ವಿಷಾಧಕರ ಸಂಗತಿಯಾಗಿದೆ.

ಇನ್ನು ರಾಜಕೀಯ ವಿಶ್ಲೇಷಣೆ ಮಾಡುವುದಾದರೆ, ಪ್ರಸಕ್ತ ನಗರದ ಭ್ರಷ್ಟ ತಾಲೂಕು ಕಚೇರಿಯ ಹಾಗೂ ನಗರಸಭೆಯ ಎಲ್ಲರಿಗೂ ತಿಳಿದಿರುವಂತಹ ಕೋಟಿ ದಾಟಿರುವ ಲೂಟಿಕೋರರು ಪಕ್ಷ ಮತ್ತು ರಾಜಕೀಯ ನೈತಿಕತೆಗಳನ್ನು ಬದಿಗಿಟ್ಟು ಶಾಸಕಾಂಗದ ವ್ಯವಸ್ಥೆಯಲ್ಲಿ ಶಾಸಕರ ಜೊತೆಯಲ್ಲಿ ಇದ್ದು ಮುಂದಿನ ಚುನಾವಣೆಗೆ ಮತ್ತೊಬ್ಬ ನಾಯಕನನ್ನು ತರುವ ವಿಚಾರಗಳನ್ನು ಹೇಳುತ್ತಿರುವುದು ಸತ್ಯವೋ ಅಥವಾ ಸತ್ಯಕ್ಕೆ ದೂರವೂ ಎಂಬುದು ಪ್ರಶ್ನಾತೀಯ ಚಿಂತನೆಯಾಗಿದೆ... ಈ ಮಧ್ಯೆ ಪ್ರಥಮ ಬಾರಿಗೆ ಶಾಸಕರಾಗಿದ್ದರೂ ಸಹ ಮುಳಬಾಗಿಲು ತಾಲೂಕಿಗೆ ನ್ಯಾಯವನ್ನು ಕಲ್ಪಿಸಲು ಜನಸಾಮಾನ್ಯರಲ್ಲಿ ನಂಬಿಕೆಯನ್ನು ಮೂಡಿಸಿದ್ದ ಜನಪ್ರಿಯ ಶಾಸಕರು ಈ ಎಲ್ಲಾ ತಂತ್ರಗಾರಿಕೆ ಮತ್ತು ಷಡ್ಯಂತರಯುಕ್ತ ರಾಜಕೀಯ ವ್ಯವಸ್ಥೆಯನ್ನು ಮೀರಿ ಸಾಮಾನ್ಯ ಪ್ರಜೆಯ ಧ್ವನಿ ಆದರೆ, ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ದಾಖಲೆ ಸೃಷ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಇನ್ನು ಪಕ್ಷ ಮತ್ತು ರಾಜಕೀಯ ನಾಯಕತ್ವದ ಬಗ್ಗೆ ಮಾತನಾಡುವುದಾದರೆ, ತಾಲೂಕಿನ ಸಮಸ್ತ ನಾಗರಿಕರು ನೋಡುವಂತೆ ಹಾಗೂ ಕಣ್ಣಿಗೆ ಕಾಣುವಂತೆ ಯಾವುದೇ ಪಕ್ಷದ ಯಾವುದೇ ಅಧ್ಯಕ್ಷ್ಯಯ ಮಂಡಳಿಯಾಗಲಿ ಅಥವಾ ರಾಜ್ಯ ಮತ್ತು ರಾಷ್ಟ್ರ ನಾಯಕರು ಬಂದಾಗ ಜನರನ್ನು ಸೇರಿಸಿ ತಮ್ಮ ನಾಯಕತ್ವವನ್ನು ಪ್ರದರ್ಶಿಸಿಕೊಳ್ಳುವ ಯಾವುದೇ ಪಕ್ಷದ ನಾಯಕರುಗಳು ಎಂದು ಅನಿಸಿಕೊಳ್ಳುವವರಾಗಲಿ... ಇಲ್ಲಿಯ ತನಕ ಯಾವುದೇ ರೀತಿಯ ನಾಯಕತ್ವ ಗುಣಗಳನ್ನು ಬೆಳೆಸಿ ನಾಯಕರುಗಳನ್ನು ಹೊರತಂದಿರುವ ನಿದರ್ಶನವೇ ಇಲ್ಲ. ಪ್ರಸಕ್ತ ಇರುವ ಎಲ್ಲಾ ರಾಜಕೀಯ ನಾಯಕರು ಬರಿ ದುಡ್ಡಿನ ಪ್ರಭಾವದಿಂದ ಅಥವಾ ಐಷಾರಾಮಿ ಕಾರುಗಳು ಮತ್ತು ಸುತ್ತಮುತ್ತಲಿನ ಜನರಿಗೆ ಹಣ ಹೆಂಡ ಹಂಚುವ ಪ್ರವೃತ್ತಿಯಿಂದ ಪ್ರಚಾರಗಳಿಸಿದವರೇ ಹೊರತು ನೈಜವಾದಂತಹ ನಾಯಕತ್ವ ಇರುವ ನಾಯಕರು ಸಿಗುವುದು ಬಹಳ ಕಷ್ಟ ಎಂಬಂತಹ ವಾತಾವರಣ ತಾಲೂಕಿನಲ್ಲಿ ಇರುವುದು ವಾಸ್ತವ.

ಇನ್ನು ಜಾತಿವಾರು ಮುಖಂಡತ್ವ ಮತ್ತು ತಾಲೂಕಿಗೆ ಸಾಮರಸ್ಯ ಬೆಳೆಸಲು ಬೇಕಾದಂತಹ ಗುಣವುಳ್ಳ ನಾಯಕತ್ವವನ್ನು ಹುಡುಕುವುದಾದರೆ, ನಮಗೆ ಸಿಗುವುದು ಶೂನ್ಯ ಅಷ್ಟೇ.

ಮುಳಬಾಗಿಲು ತಾಲೂಕಿನ ಪ್ರಬಲ ಒಂದೇ ಜನಾಂಗದ ಜನಸಂಖ್ಯೆ ಇರುವ ಸಮುದಾಯ ಎಂದರೆ ಒಕ್ಕಲಿಗ ಸಮುದಾಯ ಆಗಿರುತ್ತದೆ, ಆದರೆ ಈ ಸಮುದಾಯದ ಯಾವೊಬ್ಬ ನಾಯಕನು ರಾಜಕೀಯದ ಅಸ್ತಿತ್ವ ಪಡೆದ ಮೇಲೆ ಸಮುದಾಯದಲ್ಲಿರುವ ಯಾರೊಬ್ಬರನ್ನು ಗಣನೆಗೆ ತೆಗೆದುಕೊಳ್ಳದೆ ವಿಶ್ವಮಾನವನಂತೆ ನಟಿಸುತ್ತಿರುವುದು ವಾಸ್ತವಾಂಶದಲ್ಲಿ ಸತ್ಯವೂ ಹೌದು . ಇದೇ ಕಾರಣದಿಂದ ಪ್ರಸಕ್ತ ಇರುವ ಹಾಗೂ ಪ್ರಸಕ್ತ ಎಲ್ಲರನ್ನೂ ನಂಬಿಸುತ್ತಾ ನಾವು ಎಲ್ಲ ಜಾತಿಗಳನ್ನು ಒಂದೇ ರೀತಿ ಕಾಣುತ್ತೇವೆ ಹಾಗೂ ನಾವು ವಿಶ್ವಮಾನವರು ಎಂದು ಹೇಳುತ್ತಿರುವ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಇತರೆ ಯಾವುದೇ ಪಕ್ಷದ ಯಾವೊಬ್ಬ ನಾಯಕರು ಇಲ್ಲಿಯವರೆಗೂ ಅತಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯದಲ್ಲಿ ಕನಿಷ್ಠ 10 ಮಂದಿ ಯುವನಾಯಕರನ್ನು ತರುವಲ್ಲಿ ಸೋತಿರುತ್ತಾರೆ. ಇನ್ನು ಇವರೆಲ್ಲರೂ ಜನರಿಂದ ರಾಜಕೀಯಕ್ಕೆ ಚುನಾಯಿತರಾಗಿ ಅಥವಾ ಮೆಚ್ಚುಗೆ ಪಡೆದು ಅಥವಾ ಜನರನ್ನು ನಂಬಿಸಿ ಬರುವ ಮುನ್ನ ಸಾಮಾನ್ಯರಾಗಿದ್ದರು ಸಹ ಅತಿ ಕಡಿಮೆ ಸಮಯದಲ್ಲಿ ನೂರಾರು ಕೋಟಿಯ ಒಡೆಯರಾಗಿರುತ್ತಾರೆ ಎಂಬುದು ನಿಜಕ್ಕೂ ಭ್ರಷ್ಟರಿಗೆ ಹೆಮ್ಮೆಯ ವಿಷಯ. ಇನ್ನು ಇಂತಹ ಜನರಿಂದ ಸಾಮರಸ್ಯ ಹೇಗೆ ಬೆಳೆಯುತ್ತದೆ ಒಮ್ಮೆ ನೀವೆ ಯೋಚಿಸಿ? ಇನ್ನು ಮುಳಬಾಗಿಲು ತಾಲೂಕಿನ ಇತರೆ ಸಮುದಾಯಗಳ ವಿಚಾರಗಳು ಇದೇ ರೀತಿ ಇರುವುದು ಬಹಳ ಬೇಜಾರಿನ ಸಂಗತಿ. ವಾಸ್ತವದಲ್ಲಿ ಹಣ ಸಂಪಾದನೆ ಮಾಡಿ ಕೋಟ್ಯಂತರ ರೂಪಾಯಿಗಳ ಒಡೆಯರಾಗಿರುವ ಅತಿ ಹೆಚ್ಚು ಸಮುದಾಯದ ಚಕ್ರಗಳ ಮೇಲೆ ನಿಂತು ರಾಜಕೀಯ ಮಾಡುತ್ತಿರುವ ಮುಖಂಡರುಗಳು ತಮ್ಮದೇ ಸಮುದಾಯದ ಅಥವಾ ಸಮಾಜದ ಯಾವ ಒಬ್ಬ ಬಡವನಿಗೂ ಸಬಲೀಕರಣ ಮಾಡುವ ಬದಲು, ಅವಶ್ಯಕತೆಗೆ ಬಳಸುವ ಚಪ್ಪಲಿಯಂತೆ ತಮಗೆ ಸಿಕ್ಕ ಜನಶಕ್ತಿಯನ್ನು ಬಳಸಿಕೊಳ್ಳುತ್ತಿರುವುದು ಸತ್ಯಕ್ಕೆ ದೂರವಾದ ಮಾತಂತೂ ಅಲ್ಲ. ಇನ್ನು ಮುಂದುವರಿಸಿ ಹೇಳುವುದಾದರೆ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಕಥೆಯು ಇಷ್ಟೇ, . ಇದರಲ್ಲಿ ಸಹ ತಳಮಟ್ಟದಿಂದ ಸಮಾಜಕ್ಕೆ ಪರಿಚಿತರಾಗಿ ಒಂದು ಹಂತ ತಲುಪಿದ ನಂತರ ಯಾವೊಬ್ಬ ಬಡವರನ್ನು ಸಬಲೀಕರಣ ಮಾಡುವ ವಿಚಾರವೇ ಇಲ್ಲದೆ, ಬರಿ ಮಾತಿನ ರಾಜಕೀಯ ಮಾಡುತ್ತಾ ಜನರನ್ನು ನಂಬಿಸುತ್ತಾ ಪ್ರಸಕ್ತ ಯುವ ಪೀಳಿಗೆಯ ಭವಿಷ್ಯದ ಅರಿವೇ ಇಲ್ಲದೆ ಭ್ರಷ್ಟಾಚಾರದಿಂದ ಬರೀ ಜಮೀನುಗಳು ಕಬ್ಜಾ ಮಾಡುವುದು ಹಾಗೂ ಬಡವರನ್ನು ಗಣನೆಗೆ ತೆಗೆದುಕೊಳ್ಳದೆ ಹಣಗಹಿಗಳಾಗಿರುವುದು ಬಹಳ ನೋವಿನ ಸಂಗತಿಯಾಗಿದೆ.

ಈ ಎಲ್ಲಾ ವಿಷಯಗಳ ಸತ್ಯಾಸತ್ಯತೆಗಳನ್ನು ವಿಮರ್ಶೆ ಮಾಡುವ ಅವಶ್ಯಕತೆಯೇ ಇರುವುದಿಲ್ಲ , ಏಕೆಂದರೆ ಇದಕ್ಕೆ ನಿದರ್ಶನವೆಂಬಂತೆ ಮುಳಬಾಗಿಲು ತಾಲೂಕಿನಲ್ಲಿ ಮೀಸಲಾತಿಯ ಅವಕಾಶ ಇದ್ದರೂ ಸಹ ಎಲ್ಲಿಯೂ ನಮ್ಮ ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವೊಂದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಪಕ್ಷವಾಗಲಿ ಇಲ್ಲಿಯವರೆಗೆ ನಿಜವಾದ ಸ್ವಚ್ಛ ರಾಜಕಾರಣದ ಹಿನ್ನೆಲೆಯುಳ್ಳ ಮುಳಬಾಗಿಲು ತಾಲೂಕಿನಲ್ಲೇ ನೆಲೆ ಊರಿರುವ ಮುಳಬಾಗಿಲಿನ ಯಾವೊಬ್ಬ ನಾಗರಿಕರನ್ನು ಕನಿಷ್ಠ ಶಾಸಕ ಸ್ಥಾನದ ಆಕಾಂಕ್ಷಿಯಾಗಿ ಬೆಳೆಸಿರುವುದಿಲ್ಲ ಹಾಗೂ ಈಗಲೂ ಬೆಂಬಲಿಸುತ್ತಿಲ್ಲ ಎಂಬುದು ವಾಸ್ತವ.

ಸದ್ಯ ಮುಳಬಾಗಿಲು ತಾಲೂಕಿನಲ್ಲಿ ರಾಜಕೀಯದ ಅರ್ಥ ಎಂದರೆ ಕೆಲವು ಅನೈತಿಕವಾಗಿ ಹಣ ಸಂಪಾದನೆ ಮಾಡಿರುವ ಜನರು ಪ್ರಬುದ್ಧ ಹಾಗೂ ಸ್ವಚ್ಛವಾದಂತಹ ಸಂವಿಧಾನದ ಶಕ್ತಿಯುತ ಶಾಸಕಾಂಗ ವ್ಯವಸ್ಥೆಯ ಮೂಲಾಧಾರವಾದ ರಾಜಕೀಯ ವ್ಯವಸ್ಥೆಯನ್ನು ಬದಿಗಿಟ್ಟು ದುರ್ಬಳಕೆ ಮಾಡುತ್ತಾ ಸಮುದಾಯಗಳನ್ನು ದಿಕ್ಕು ತಪ್ಪಿಸಿ ಸಮುದಾಯದ ನಾಯಕತ್ವಗಳನ್ನು ಕಿತ್ತುಕೊಂಡು ಕನಿಷ್ಠ ಸಮುದಾಯಗಳ ಸಾಮರಸ್ಯ ವಿಷಯವಾಗಿ ಗಮನಕೊಡದೆ ರಾಷ್ಟ್ರೀಯ ಐಕ್ಯತೆಯನ್ನು ಬದಿಗಿಟ್ಟು, ಜಾತಿ ಜಾತಿಗಳ ಮಧ್ಯೆ ವೈರತ್ವವನ್ನು ಸೃಷ್ಟಿಸುವಂತಹ ವ್ಯವಸ್ಥೆಯನ್ನು ಪ್ರಚಲಿತಗೊಳಿಸಿ ಅತಿ ಹೆಚ್ಚು ಜನರನ್ನು ಮೂರ್ಖರನ್ನಾಗಿಸಿ ತಮ್ಮ ಜೀವನ ನಡೆಸಿಕೊಳ್ಳುತ್ತಿರುವುದು ಸರಿಯೇ?

ಪ್ರಸಕ್ತ ಇಲ್ಲಿ ವಿಮರ್ಶ ಮಾಡಿರುವ ಎಲ್ಲ ವಿಷಯವು ಖಂಡಿತವಾಗಿಯೂ ಈ ವಿಷಯ ವ್ಯಾಪ್ತಿಗೆ ಅನ್ವಯಿಸಿರುವಂತಹ ವ್ಯಕ್ತಿಗಳಿಗೆ ಅಥವಾ ಭ್ರಷ್ಟಾಚಾರದಿಂದ ಕೂಡಿದ ದುಷ್ಟರಿಗೆ ಹೊರತು, ಯಾರೇ ಒಬ್ಬ ಪ್ರಾಮಾಣಿಕ ಮತ್ತು ರಾಷ್ಟ್ರೀಯ ಮೌಲ್ಯಗಳುಳ್ಳ ಪ್ರಭುದ್ಧ ಜನರಿಗೆ ಅಲ್ಲ. ಹಾಗೂ ನನಗೆ ಪೂರ್ಣ ನಂಬಿಕೆ ಖಂಡಿತವಾಗಿಯೂ ಇರುವುದೆೇನೆಂದರೆ ನಮ್ಮ ಮುಳಬಾಗಿಲು ತಾಲೂಕಿನಲ್ಲಿ ಮೇಲೆ ವಿಮರ್ಷಿಸಿರುವ ಹೆಚ್ಚಿನ ವಿಷಯಗಳು, ಈ ರೀತಿ ಇರಬಾರದು ಎಂದು ಹೇಳುವ ನಿಟ್ಟಿನಲ್ಲಿ ಜಾಗೃತರಾಗಲು ತಿಳಿಸಿರುವ ಮೌಲ್ಯಯುಕ್ತ ವಿಮರ್ಶೆ ಎಂದು ತಿಳಿದಿರುತ್ತೇನೆ.

. ಜೈ ಹಿಂದ್ ಜೈ ಭುವನೇಶ್ವರಿ