“ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆಯಲ್ಲಿ ಕನಿಷ್ಠ ಸಾಂವಿಧಾನಿಕ ಅಳವಡಿಕೆಯಲ್ಲಿ ನಿರ್ಲಕ್ಷೆ? ಮುಂದಿನ ಭವಿಷ್ಯದ ಭಾರತದ ಅಳಿವಿಗೆ! ಇಂದಿನ ಮಕ್ಕಳ ಅಭ್ಯಾಸಗಳೇ ಕಣ್ಣಿಗೆ ಕಾಣುವ ಅಂಶಗಳು… ಏರುತ್ತಿರುವ ಚಿಂತೆ”
“ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆಯಲ್ಲಿ ಕನಿಷ್ಠ ಸಾಂವಿಧಾನಿಕ ಅಳವಡಿಕೆಯಲ್ಲಿ ನಿರ್ಲಕ್ಷೆ? ಮುಂದಿನ ಭವಿಷ್ಯದ ಭಾರತದ ಅಳಿವಿಗೆ! ಇಂದಿನ ಮಕ್ಕಳ ಅಭ್ಯಾಸಗಳೇ ಕಣ್ಣಿಗೆ ಕಾಣುವ ಅಂಶಗಳು… ಏರುತ್ತಿರುವ ಚಿಂತೆ” ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ, ಕರ್ನಾಟಕ – ಬೆಳಗಿನ ಸಮಯದಲ್ಲಿ ಮಕ್ಕಳ ಮತ್ತು ಕಿರಿಯರ ಕಾನೂನು ಮತ್ತು ನಿಯಮಗಳನ್ನು ನಿರ್ಲಕ್ಷಿಸುವ ದೃಶ್ಯವು ವಿಷಾದನೀಯವಾಗಿದೆ. ಈ ವರ್ತನೆಗೆ ಪೋಷಕರು, ಶಾಲಾ ಆಡಳಿತಗಳು ಮತ್ತು ಟ್ರಾಫಿಕ್ ಪೊಲೀಸ್‌ಗಳ ನಿರ್ಲಕ್ಷ್ಯವು ಸಹ ಕಾರಣವಾಗಿದೆ.
NATIONALMULBAGALSTATENEWS
Rohan kumar K
11/10/20241 min read


ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ, ಕರ್ನಾಟಕ – “ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆಯಲ್ಲಿ ಕನಿಷ್ಠ ಸಾಂವಿಧಾನಿಕ ಅಳವಡಿಕೆಯಲ್ಲಿ ನಿರ್ಲಕ್ಷೆ? ಮುಂದಿನ ಭವಿಷ್ಯದ ಭಾರತದ ಅಳಿವಿಗೆ! ಇಂದಿನ ಮಕ್ಕಳ ಅಭ್ಯಾಸಗಳೇ ಕಣ್ಣಿಗೆ ಕಾಣುವ ಅಂಶಗಳು… ಏರುತ್ತಿರುವ ಚಿಂತೆ”
ಬೆಳಗಿನ ಸಮಯದಲ್ಲಿ ಮಕ್ಕಳ ಮತ್ತು ಕಿರಿಯರ ಕಾನೂನು ಮತ್ತು ನಿಯಮಗಳನ್ನು ನಿರ್ಲಕ್ಷಿಸುವ ದೃಶ್ಯವು ವಿಷಾದನೀಯವಾಗಿದೆ. ಈ ವರ್ತನೆಗೆ ಪೋಷಕರು, ಶಾಲಾ ಆಡಳಿತಗಳು ಮತ್ತು ಟ್ರಾಫಿಕ್ ಪೊಲೀಸ್‌ಗಳ ನಿರ್ಲಕ್ಷ್ಯವು ಸಹ ಕಾರಣವಾಗಿದೆ.
ಅನೇಕ ಭ್ರಷ್ಟ ಅಧಿಕಾರಿಗಳು ಮತ್ತು ಕಳ್ಳರು ಕಪ್ಪು ಹಣವನ್ನು ನಿರ್ವಹಿಸುತ್ತಿರುವುದು ಏನು ಮಾಡದ ಪರಿಸ್ಥಿತಿಯಲ್ಲಿ ಪ್ರಸಕ್ತ ಕಾರ್ಯಾಂಗದ ನಿರ್ವಹಣೆ ಮತ್ತು ಶಾಸಕಾಂಗದ ಜವಾಬ್ದಾರಿ ನಡೆದು ಹೋಗುತ್ತಿದೆ, ಆದರೆ ಇವರೆಲ್ಲರೂ ಏನೇ ಇರಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಒಳ್ಳೆಯ ವಾತಾವರಣವನ್ನು ಮತ್ತು ಸಮಾಜದಲ್ಲಿ ಒಳ್ಳೆಯ ಗೌರವವನ್ನು ತಮ್ಮ ಮಕ್ಕಳಿಗೂ ಸಿಗಲಿ ಎಂದು ಏನೆಲ್ಲಾ ಮಾಡಿರುವ ಸಮಾಜದಲ್ಲಿನ ಅತಿಹೆಚ್ಚು ಮಂದಿಗೆ ಇಂತಹ ಸೂಕ್ಷ್ಮ ವಿಚಾರಗಳು ಅರ್ಥವಾಗುತ್ತಿಲ್ಲ ಏಕೆ? ಇಂದು ನಮ್ಮ ದೇಶದಲ್ಲಿ ಮಕ್ಕಳಿಗೆ ಈಗಿನಿಂದಲೇ ನಾವು ಕಾನೂನು ಮತ್ತು ರಾಷ್ಟ್ರೀಯ ಮೌಲ್ಯಗಳ ವಿಚಾರವಾಗಿ ಭಯ ಭಕ್ತಿಯನ್ನು ಬೆಳೆಸದೆ ನಿರ್ಲಕ್ಷೆತೋರುವಂತಹ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಟ್ಟರೆ, ನಾಳೆ ನಿಮ್ಮ ಮಕ್ಕಳಿಗೆ ಭದ್ರತೆ ಒದಗಿಸುವವರು ಯಾರು ಎಂದು ಒಮ್ಮೆ ಯೋಚಿಸಿ?
ಪೋಷಕರು ತಮ್ಮ ಮಕ್ಕಳಿಗೆ ಸಂವಿಧಾನ ಮತ್ತು ದೇಶದ ಗೌರವವನ್ನು ಕಲಿಸಲು ಪ್ರಯತ್ನಿಸುತ್ತಾರೆ, ಈ ವಿಷಯವಾಗಿ ಸಂಪಾದನೆ ಮಾಡಿ ಒಳ್ಳೆ ಒಳ್ಳೆಯ ಶಾಲೆ ಕಾಲೇಜುಗಳಿಗೆ ಸೇರಿಸಿ ಉತ್ತಮ ಪ್ರಜೆಯಾಗಲು ಬಯಸುತ್ತಾರೆ. ಆದರೆ ಮಕ್ಕಳಿಗೆ ಬಾಲ್ಯದಲ್ಲಿ ಸಂವಿಧಾನ ಮತ್ತು ಭಾರತದ ಸಾರ್ವಭೌಮತ್ವದ ಬಗ್ಗೆ ಮೌಲ್ಯಗಳನ್ನು ತಿಳಿಸದಿದ್ದರೆ ಮಕ್ಕಳು ಅನೈತಿಕ ಅಭ್ಯಾಸಗಳನ್ನು ಮುಂದುವರಿಸುತ್ತಾರೆ ಹಾಗೂ ಇಂತಹ ಕಿರಿಯರ ವರ್ತನೆಯಲ್ಲಿ ಮುಂದಿನ ಸಮಾಜದ ವ್ಯವಸ್ಥೆಯ ಕಲ್ಪನೆ ಸ್ಪಷ್ಟವಾಗಿ ಕಾಣುತ್ತದೆ ಒಂದು ವೇಳೆ ಅವರು ನಾವು ಭಾರತೀಯರು ಎಂದು ಹೇಳಿಕೊಂಡರು ಸಹ ಸಂವಿಧಾನದ ನಿಯಮಗಳನ್ನು ಪಾಲಿಸಲು ವಿಫಲರಾಗಿ ಅಪರಾಧಿಗಳಾಗಿ ಬೆಳೆಯುತ್ತಾರೆ.
ಈ ಸಮಸ್ಯೆಗಳನ್ನು ಪರಿಹರಿಸಲು ವ್ಯವಸ್ಥೆ ಮತ್ತು ಆಡಳಿತ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಹಕ್ಕುಗಳು, ನ್ಯಾಯ ಮತ್ತು ಸಾಮಾಜಿಕ ಸುಧಾರಣೆಗಳ ಬಗ್ಗೆ ಅನೇಕ ಪ್ರಶ್ನೆಗಳು ಕೇಳಲಾಗುತ್ತವೆ! ಆದರೆ ನಿಜವಾದ ನಾಗರಿಕತೆ ಮೂಲಭೂತ ಪ್ರಜಾಪ್ರಭುತ್ವ ತತ್ವಗಳನ್ನು ಪಾಲಿಸುವುದು ಮತ್ತು ಈ ಮೌಲ್ಯಗಳನ್ನು ಮಕ್ಕಳಿಗೆ ಬೋಧಿಸುವುದು ಮುಖ್ಯವಾಗಿದೆ. ಇದಿಲ್ಲದೆ, ಯುವಜನರ ಮತ್ತು ದೇಶದ ಭವಿಷ್ಯ ಕತ್ತಲೆಯಲ್ಲೇ ಉಳಿಯುತ್ತದೆ ಎಂಬುದನ್ನು ಅರಿತು ನಾವು ನಮ್ಮ ಹಕ್ಕುಗಳನ್ನು ಮಂಡಿಸುವ ಮೊದಲು ಈ ದೇಶದ ಪ್ರಜೆಯಾಗಿ ಮತ್ತು ಹೆಮ್ಮೆಯ ನಾಗರಿಕರಾಗಿ ನಮ್ಮ ಜವಾಬ್ದಾರಿಗಳನ್ನು ಅರಿತು ಮಕ್ಕಳಿಗೆ ಬಾಲ್ಯದಿಂದಲೇ ನಾವು ಶಿಸ್ತನ್ನು ಸಂಸ್ಕಾರವನ್ನು ಕಲಿಸಬೇಕು.
ಈ ಪರಿಸ್ಥಿತಿ, ತೋರುವಷ್ಟು ಸಣ್ಣದಾಗಿದ್ದರೂ, ಉತ್ತಮ ವ್ಯವಸ್ಥೆಯನ್ನು ಸಾಧಿಸಲು ವಿಫಲವಾಗಿರುವುದನ್ನು ತೋರಿಸುತ್ತದೆ. ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ತಕ್ಷಣದ ಗಮನ ಮತ್ತು ಕ್ರಮ ಅಗತ್ಯವಿದೆ.
Integrity
Promoting ethical journalism for Mulbagal community.
News
Updates
+91-9480563131
© 2024. All rights reserved.