ಶಾಸಕರೇ... ದಯಮಾಡಿ ನಿಮ್ಮ ಪ್ರಜೆಗಳ ಪ್ರಜಾಪ್ರತಿನಿಧಿಯಾಗಿ. ನಿಮ್ಮದೇ ಕಾರ್ಯಂಗವನ್ನು ಪ್ರಶ್ನಿಸಿ? ನಾಗರೀಕರಿಗೆ, ಪ್ರಜಾಪ್ರಭುತ್ವದಲ್ಲಿನ ಗೌರವ ಮತ್ತು ಮೌಲ್ಯಗಳನ್ನು ಮತ್ತಷ್ಟು ಹೆಚ್ಚಿಸಿ!

ಮುಳಬಾಗಿಲು ತಾಲೂಕಿನ ಶಾಸಕಾಂಗದ ಕಾರ್ಯವೈಕರಿಯ ಕನ್ನಡಿಯಾಗಿ ಕಾಣುವುದೇ ಕಾರ್ಯಾಂಗ... ಪ್ರಸಕ್ತ ತಾಲೂಕಿನ ಜನಪ್ರಿಯ ಶಾಸಕರಾದ ಸಮೃದ್ಧಿ ಮಂಜುನಾಥ್ ರವರು ಗಮನ ಕೊಡಲೇಬೇಕಾದ ಮತ್ತೊಂದು ಸಾರ್ವಜನಿಕ ಅವ್ಯವಸ್ಥೆಯ ಸಾಗರದ ಮೇಲೆ ಬೆಳಕನ್ನು ಚೆಲ್ಲುವ ಬನ್ನಿ...

NEWSMULBAGAL

Rohan kumar K

8/28/20241 min read

ಮುಳಬಾಗಿಲು ತಾಲೂಕಿನ ಶಾಸಕಾಂಗದ ಕಾರ್ಯವೈಕರಿಯ ಕನ್ನಡಿಯಾಗಿ ಕಾಣುವುದೇ ಕಾರ್ಯಾಂಗ... ಪ್ರಸಕ್ತ ತಾಲೂಕಿನ ಜನಪ್ರಿಯ ಶಾಸಕರಾದ ಸಮೃದ್ಧಿ ಮಂಜುನಾಥ್ ರವರು ಗಮನ ಕೊಡಲೇಬೇಕಾದ ಮತ್ತೊಂದು ಸಾರ್ವಜನಿಕ ಅವ್ಯವಸ್ಥೆಯ ಸಾಗರದ ಮೇಲೆ ಬೆಳಕನ್ನು ಚೆಲ್ಲುವ ಬನ್ನಿ...
ಸಾರ್ವಜನಿಕರ ಸೇವೆಯಲ್ಲಿ ಇರಬೇಕಾದ ಉನ್ನತ ದರ್ಜೆಯ ಸರ್ಕಾರಿ ಕೆಲಸಗಾರರಾದ ತಹಸಿಲ್ದಾರ್ ರವರು ಮತ್ತು ನಗರದ ಪೌರಾಯುಕ್ತ ಸೇರಿದಂತೆ ಇನ್ನುಳಿದ ಎಲ್ಲಾ ಕಾರ್ಯಾಂಗದ ವ್ಯಾಪ್ತಿಗೆ ಬರುವ ಶಾಸಕರ ಕಾರ್ಯವೈಕರಿಯನ್ನು ನಾಗರಿಕರಿಗೆ ತಲುಪಿಸುವ ವ್ಯವಸ್ಥೆ ಅಡಿಯಲ್ಲಿ ಬರುವ ಸರ್ಕಾರಿ ಸೇವೆಯಲ್ಲಿನ ಕಾಯಕ ಮಾಡುತ್ತಿರುವ ಎಲ್ಲರೂ, ನಾಗರೀಕರ ವಿಷಯವಾಗಿ ಎಷ್ಟರಮಟ್ಟಿಗೆ ತಮ್ಮ ಕೆಲಸವನ್ನು ಸಂವಿಧಾನದ ಗೌರವವನ್ನಿರಿಸಿ ನಡೆದುಕೊಳ್ಳುತ್ತಿದ್ದಾರೆ ಎಂದು ಒಂದು ಬಾರಿ ಯೋಚಿಸೋಣ.

ಸಾರ್ವಜನಿಕರ ಅಭಿಪ್ರಾಯದಂತೆ ಮತ್ತು ಪ್ರಸಕ್ತ ವಾಸ್ತವವನ್ನು ಹೇಳುವುದಾದರೆ, ಇಲ್ಲಿಯವರೆಗೂ ಯಾವುದೇ ರೀತಿ ರಾಷ್ಟ್ರೀಯ ಹಬ್ಬಗಳಿಗಾಗಲಿ ಅಥವಾ ಸಾರ್ವಜನಿಕರ ಕ್ಷೇತ್ರಕ್ಕೆ ತಲುಪಿಸಬೇಕಾದ ಕಾರ್ಯಕ್ರಮಗಳನ್ನು ನಮ್ಮ ಮುಳಬಾಗಿಲು ತಾಲೂಕಿನ ತಹಸಿಲ್ದಾರ್ ರವರ ಕಚೇರಿಯ ಸೇವಾ ವ್ಯಾಪ್ತಿಗೆ ಬರುವ ವಿಚಾರವಾಗಲಿ ಅಥವಾ ನಗರದ ಪುರಸಭೆಯ ವ್ಯಾಪ್ತಿಗೆ ಬರುವ ವಿಚಾರವಾಗಲಿ, . ಇಲ್ಲಿಯ ತನಕ ಯಾವುದೇ ಕಾರಣಕ್ಕೂ ಸಮಗ್ರತೆಯಿಂದ ತಾಲೂಕಿನ ಎಲ್ಲಾ ನಾಗರಿಕರಿಗೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿರುವ ಸಂಘಟನೆಗಳಿಗೆ ಹಾಗೂ ಇಲ್ಲಿನ ಹಿರಿಯ ನಾಗರಿಕರಿಗಾಗಲಿ ಯಾವುದೇ ರೀತಿಯ ಮಾಹಿತಿಯನ್ನು ಸರಿಯಾಗಿ ತಲುಪಿಸುತ್ತಿಲ್ಲ.ಇನ್ನು ಈ ವಿಚಾರವನ್ನು ಪ್ರಕರವಾಗಿ ಹೇಳುವುದಾದರೆ, ಅದೆಷ್ಟೋ ಸರ್ಕಾರಿ ಕಾರ್ಯಕ್ರಮಗಳು ನಾಗರಿಕರ ಗಮನಕ್ಕೆ ಬಾರದೆ ನಾಲ್ಕು ಜನರ ಮಧ್ಯದಲ್ಲಿ ಮತ್ತು ಜನರ ಕಡೆ ತಿರುಗಿ ನೋಡದ ಜನನಾಯಕರ ಸಮ್ಮುಖದಲ್ಲಿ, ನಮ್ಮ ಸರ್ಕಾರಿ ಹಣದಿಂದ ಸಾರ್ವಜನಿಕರನ್ನು ಗಮನಕ್ಕೆ ತೆಗೆದುಕೊಳ್ಳದೆ ನಡೆದೆ ಹೋಗುತ್ತಿದೆ, ನಾವು ಈ ವಿಷಯವಾಗಿ ರ್‌ ಟಿ ಐ ಮಾಹಿತಿಯನ್ನು ಪಡೆಯಲು ಒಮ್ಮೆ ಯೋಚಿಸಲೇಬೇಕು, ಅದೇನೆಂದರೆ ನಮ್ಮ ಸರ್ಕಾರಿ ಹಣದಲ್ಲಿ ಅಥವಾ ವೆಚ್ಚದಲ್ಲಿ ವರ್ಷದಲ್ಲಿ ಎಷ್ಟು ಕಾರ್ಯಕ್ರಮಗಳು ಕಚೇರಿಗಳಲ್ಲಿ ನಡೆದಿದೆ ಹಾಗೂ ಅಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರನ್ನು ಯಾವ ಆಧಾರದ ಮೇಲೆ ಆಹ್ವಾನಿಸಿರುತ್ತಾರೆ ಅಥವಾ ಎಷ್ಟು ಜನ ಸಾರ್ವಜನಿಕರನ್ನು ಆಹ್ವಾನಿಸಲಾಗಿತ್ತು ಮತ್ತು ಮುಖ್ಯವಾಗಿ ಅಂತಹ ಕಾರ್ಯಕ್ರಮಗಳನ್ನು ನಡೆಯುತ್ತಿರುವ ವಿಚಾರವನ್ನು ಸಾರ್ವಜನಿಕರಿಗೆ ಹೇಗೆ ತಿಳಿಸಲಾಯಿತು, ಈ ಕಾರ್ಯಕ್ರಮದ ನಿರ್ವಹಣೆ ಅಥವಾ ವ್ಯವಸ್ಥೆಯಿಂದ ಸರ್ಕಾರ ಯಾವ ಪ್ರಯೋಜನವನ್ನು ಪಡೆಯಿತು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ಜವಾಬ್ದಾರಿಯನ್ನು ಎಲ್ಲಾ ದರ್ಜೆಯ ಸರ್ಕಾರಿ ಸೇವಕರು ಅವರ ವ್ಯಾಪ್ತಿಯಲ್ಲಿ ಎಷ್ಟರಮಟ್ಟಿಗೆ ನಿಭಾಯಿಸಿರುತ್ತಾರೆ. . ಈ ಪ್ರಶ್ನೆಗಳನ್ನು ನಮ್ಮೆಲ್ಲ ನಾಗರಿಕರ ಹಾಗೂ ಪ್ರಜೆಗಳ ಪ್ರತಿನಿಧಿಯಾಗಿರುವ ಜನಪ್ರಿಯ ಶಾಸಕರಾದ ಸಮೃದ್ಧಿ ಮಂಜುನಾಥ್ ರವರು ಕಾರ್ಯಾಂಗವನ್ನು ಕೇಳಲೇಬೇಕು.
ಈ ವಿಚಾರ 10 ಜನರ ಪ್ರಶ್ನೆ ಆಗಿರುವುದಿಲ್ಲ, ಬದಲಿಗೆ ಇಂದಿನ ಕಾಲಘಟ್ಟಕ್ಕೆ, ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿ ನಮ್ಮ ಭಾರತ ದೇಶದ ಮುಂದಿನ ಭವಿಷ್ಯದ ಶಕ್ತಿಯಾಗಿರುವ ಯುವ ಪೀಳಿಗೆ ತಮ್ಮ ಮನದಾಳದಲ್ಲಿ ಕೇಳಲಾಗದ ಮತ್ತು ಕೇಳಲೇಬೇಕು ಎಂಬ ಹಿತಾಸಕ್ತಿಯ ಜಾಗೃತ ಮನೋಭಾವದ ಅಡಿಯಲ್ಲಿ ಬರುವ ಒಂದು ಪ್ರಬುದ್ಧ ಪ್ರಶ್ನೆ ಆಗಿರುತ್ತದೆ.