ನಮ್ಮ ಭವಿಷ್ಯ, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯ ವಾತಾವರಣವನ್ನು ಸೃಷ್ಟಿಸುವುದು ಎಂಬುದನ್ನು ಎಂದಿಗೂ ಮರೆಯದಿರಿ
ಭವಿಷ್ಯದ ಬಲಿಷ್ಠ ಭಾರತವನ್ನು ನಿರ್ಧರಿಸಬೇಕಾದ ಹಾಗೂ ಜವಾಬ್ದಾರಿಯುತವಾಗಿ ಮುನ್ನಡೆಸಬೇಕಾದ ಯುವ ಪೀಳಿಗೆಯ ಬಗ್ಗೆ ಕನಿಷ್ಠ ಗಮನವನ್ನು ಎಲ್ಲಿಯೂ ಯಾರು ಕೊಡದಿರುವುದು, ಒಂದು ವಿಪರ್ಯಾಸ ಹಾಗೂ ಬಹಳ ನೋವಿನ ಸಂಗತಿಯಾಗಿದೆ
MULBAGAL
Rohan kumar K
8/28/20241 min read


ಮುಳಬಾಗಿಲು ತಾಲೂಕಿನ ಬಹಳಷ್ಟು ಸಾಮಾಜಿಕ ವಲಯದ ಜಾಲತಾಣಗಳಾಗಲಿ, ಬಹಳ ಸಮಾಜಮುಖಿ ಶ್ರಮಿಸುತ್ತಿರುವ ಸಹಕಾರಿ ಅಥವಾ ಸಂಘಟನಾತ್ಮಕ ವೇದಿಕೆ ಇರಲಿ, ರಾಜಕೀಯ ನಾಯಕರೇ ಇರಲಿ ಅಥವಾ ಆರ್ಥಿಕವಾಗಿ ಪ್ರಬಲವಾಗಿರುವ ವರ್ತಕ ಸಮಾಜ ಅಥವಾ ನಾಯಕರು ಎಂದು ಹೇಳಿಕೊಳ್ಳುವ ಬುದ್ಧಿಜೀವಿಗಳೇ ಇರಲಿ...? ಎಲ್ಲಿಯೂ ನಮಗೆ , ಮುಳಬಾಗಿಲು ತಾಲೂಕಿನ ಮುಂದಿನ ಪೀಳಿಗೆಯ ಅಥವಾ ಭಾರತದ ಶಕ್ತಿಯ ಕೇಂದ್ರವಾದ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾದ ವಾತಾವರಣವಾಗಲಿ, ಕೌಶಲ್ಯ ಬಗೆಗಿನ ಪ್ರಗತಿಪರ ಆಲೋಚನೆ ಆಗಲಿ, ಉದ್ಯೋಗಾವಕಾಶವನ್ನು ಸೃಷ್ಟಿಸುವ ನೆಟ್ಟಿನಲ್ಲಿ ಚರ್ಚೆಯಾಗಲಿ, ರಾಜಕೀಯ ಕ್ಷೇತ್ರದಲ್ಲಿ ಯುವಕರು ಪಾಲ್ಗೊಳ್ಳಬೇಕು ಎಂಬುವ ಮಹತ್ತರವಾದ ವಿಷಯದ ಪ್ರಸ್ತಾಪವಾಗಲಿ, ಭವಿಷ್ಯದ ಬಲಿಷ್ಠ ಭಾರತವನ್ನು ನಿರ್ಧರಿಸಬೇಕಾದ ಹಾಗೂ ಜವಾಬ್ದಾರಿಯುತವಾಗಿ ಮುನ್ನಡೆಸಬೇಕಾದ ಯುವ ಪೀಳಿಗೆಯ ಬಗ್ಗೆ ಕನಿಷ್ಠ ಗಮನವನ್ನು ಎಲ್ಲಿಯೂ ಯಾರು ಕೊಡದಿರುವುದು, ಒಂದು ವಿಪರ್ಯಾಸ ಹಾಗೂ ಬಹಳ ನೋವಿನ ಸಂಗತಿಯಾಗಿದೆ.
ಈ ನಿಟ್ಟಿನಲ್ಲಿ ನಮ್ಮ" ಮುಳಬಾಗಿಲು ತಾಲೂಕು ನಾಗರಿಕ ವೇದಿಕೆ"ಯ ಎಲ್ಲಾ ನಿರ್ದೇಶಕರು ಬಹಳಷ್ಟು ವಿಮರ್ಶೆ ಮಾಡಲಾಗಿ, ಇದೊಂದು ಬಹಳ ಅವಶ್ಯಕವಿರುವ ಹಾಗೂ ನಿಜವಾದ ಜವಾಬ್ದಾರಿಯುತ ನಾಗರೀಕ ವಾತಾವರಣವನ್ನು ಸೃಷ್ಟಿಸುವಲ್ಲಿ ಮೊದಲ ಹೆಜ್ಜೆಯಾಗಬೇಕು ಎಂಬ ನಿರ್ಣಯದೊಂದಿಗೆ ಬಲಿಷ್ಠವಾದ ಭಾರತದ ಉತ್ಕೃಷ್ಟತೆಗಾಗಿ ಮುಳಬಾಗಿಲು ತಾಲೂಕಿನಿಂದ ನಮ್ಮ ನಾಗರೀಕರ ವೇದಿಕೆಯಿಂದ ಯುವ ಪೀಳಿಗೆಗಾಗಿಯೇ, ನಾಯಕತ್ವವನ್ನು ಬೆಳೆಸುವ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ವಿಚಾರವಾಗಿ ವೇದಿಕೆ ಹಾಗೂ ಕೌಶಲ್ಯ ಯುಕ್ತ ಯುವ ಸಮೂಹ ನಿರ್ಮಾಣದ ಮತ್ತಷ್ಟು ಚಟುವಟಿಕೆಗಳನ್ನು ನಡೆಸುವ ತೀರ್ಮಾನಗಳನ್ನು ತೆಗೆದುಕೊಂಡಿರುತ್ತದೆ.
ಸದ್ಯ ನಮ್ಮ ಮುಳಬಾಗಿಲು ತಾಲೂಕಿನಲ್ಲಿ, ರಾಜಕೀಯ ರಹಿತ ಭಾರತೀಯ ಮೌಲ್ಯಗಳ ಜಾತ್ಯತೀತ ಐಕ್ಯತ ಭಾವನೆಯೊಂದಿಗೆ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಾಂವಿಧಾನಿಕ ಮತ್ತು ಪ್ರಜ್ಞಾವಂತ ಸಮಾಜದ ರೀತಿಯಲ್ಲಿ ಪ್ರಶ್ನಿಸುವ ಹಾಗೂ ಸಂವಿಧಾನದ ಅಸ್ಮಿತೆಗಳನ್ನು ಎತ್ತಿ ಹಿಡಿಯುವ ಬಲಿಷ್ಟ ಅರ್ಹ ವೇದಿಕೆ ಎಂದು ಹೇಳಿಕೊಳ್ಳಲು ಭಾರತೀಯ ಹೆಮ್ಮೆಯ ನಾಗರಿಕರಾಗಿ ನಮಗೆ ಮತ್ತಷ್ಟು ಹೆಮ್ಮೆ ಇದೆ.
ಈ ನಿಟ್ಟಿನಲ್ಲಿ ನಾವು ಮುಳಬಾಗಿಲು ತಾಲೂಕಿನ ಎಲ್ಲಾ ನಾಗರಿಕರನ್ನು ಹಾಗೂ ಪ್ರಜಾ ಬಂಧುಗಳನ್ನು, ಮನವಿ ಮಾಡುತ್ತಾ ಜಾಗೃತಗೊಳಿಸುವ ವಿಚಾರವೇನಂದರೆ, ದಯಮಾಡಿ ಇನ್ನಾದರೂ ಮುಂದಿನ ಯುವ ಪೀಳಿಗೆಯ ಬಗ್ಗೆ ಗಮನಹರಿಸುವುದರೊಂದಿಗೆ ನಮ್ಮ ಮುಳಬಾಗಿಲು ತಾಲೂಕು ನಾಗರಿಕರ ವೇದಿಕೆಯ ಮಹತ್ವಾಕಾಂಕ್ಷೆಯ ಬಲಿಷ್ಠ ಮುಳಬಾಗಿಲು ತಾಲೂಕನ್ನು ನಿರ್ಮಾಣ ಮಾಡುವ ವಿಚಾರವಾಗಿ ನಮ್ಮ ಸಂಘದ ಪಾರದರ್ಶಕ ಆಡಳಿತವನ್ನು ಮತ್ತಷ್ಟು ಬಲಿಷ್ಠ ಗೊಳಿಸಲು ಮತ್ತು ಜವಾಬ್ದಾರಿಯಿಂದ ಸೇವಾ ವ್ಯಾಪ್ತಿಯನ್ನು ತಾಲೂಕಿನಾದ್ಯಂತ ತಲುಪಿಸಲು ಕೈಜೋಡಿಸಬೇಕಾಗಿ, ನಮ್ಮೆಲ್ಲ ನಿರ್ದೇಶಕರ ಮನವಿಯ ನಮಸ್ಕಾರಗಳು.
Integrity
Promoting ethical journalism for Mulbagal community.
News
Updates
+91-9480563131
© 2024. All rights reserved.