ಗೊಟ್ಟುಕುಂಟೆ ಸರ್ಕಾರಿ ಶಾಲೆ ಬಿಳ್ಕೊಡುಗೆ ಕಾರ್ಯಕ್ರಮ

ಗೊಟ್ಟುಕುಂಟೆ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಎನ್. ತಾಯಲೂರಪ್ಪ ಹಾಗೂ ಸಹಶಿಕ್ಷಕಿ ರವರಾದ ಉಮಾ. ವಿ ಓಬಲ್ ರೆಡ್ಡಿ ರವರುಗಳ ಬಿಳ್ಕೊಡುಗೆ ಕಾರ್ಯಕ್ರಮ

MTCF

5/8/20241 min read

ಗೊಟ್ಟುಕುಂಟೆ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಎನ್. ತಾಯಲೂರಪ್ಪ ಹಾಗೂ ಸಹಶಿಕ್ಷಕಿ ರವರಾದ ಉಮಾ. ವಿ ಓಬಲ್ ರೆಡ್ಡಿ ರವರುಗಳ ಕಾಯಕವೇ ಕೈಲಾಸ ಎಂಬ ನುಡಿಗೆ ತಕ್ಕಂತಹ ನಿಸ್ವಾರ್ಥ ಸೇವೆಯ ಕನ್ನಡಿಯಂತೆ, ಗ್ರಾಮದ ಎಲ್ಲಾ ನಾಗರಿಕರು, ಹಳೆಯ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಶಿಕ್ಷಕ ಶಿಕ್ಷಕಿಯರು, ಶಾಲೆಯಿಂದ ಬಹಳಷ್ಟು ಜ್ಞಾನವನ್ನು ಪಡೆದ ಅನೇಕ ಮಂದಿ ಒಳಗೊಂಡಂತೆ ಪ್ರಸಕ್ತ ಸರ್ಕಾರಿ ಶಾಲೆಯ ಇಲ್ಲಿಯವರೆಗೆ ನಡೆದಿರುವಂತಹ ಅಭಿವೃದ್ಧಿ ಚಟುವಟಿಕೆಗಳ ಕಾರಣದಿಂದ ಮತ್ತಷ್ಟು ಗೌರವ ಮತ್ತು ವಿದ್ಯಾರ್ಥಿಗಳ ಸಾಧನೆಗಳ ಕೀರ್ತಿ ಎಲ್ಲವೂ ಸೇರಿ, ಬಹಳ ಅಭಿಮಾನ ಮತ್ತು ಬಾಂಧವ್ಯದ ಮೌಲ್ಯಗಳ ಬೀಳ್ಕೊಡುಗೆ ಕಾರ್ಯಕ್ರಮ ಇಂದು ನಡೆಯಿತು, ಇದೇ ಸಂದರ್ಭದಲ್ಲಿ ಮುಳಬಾಗಿಲು ನಾಗರಿಕ ವೇದಿಕೆಯ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಈ ಕಾರ್ಯಕ್ರಮ ಬರೀ ಬೀಳ್ಕೊಡುಗೆ ಕಾರ್ಯಕ್ರಮವಾಗಿ ಇರದೆ, ಶಾಲೆಯ ಮತ್ತು ಅಲ್ಲಿನ ಶಿಕ್ಷಕರ ವ್ಯವಸ್ಥೆಯು ಹೇಗೆ ಗ್ರಾಮೀಣತೆಯನ್ನು ಪ್ರಭಾವಿತರನ್ನಾಗಿ ಮಾಡಿ ಸಮಾಜಕ್ಕೆ ಮಾದರಿಯಾಗಬಹುದು ಎಂಬುವ ವಾಸ್ತವಿಕ ಸಂದೇಶವನ್ನು ಒಳಗೊಂಡ ವೇದಿಕೆಯಾಗಿತ್ತು. ಇದೇ ಸಂದರ್ಭದಲ್ಲಿ ಶಿಕ್ಷಕರಾದ ಸುಬ್ರಹ್ಮಣ್ಯ ಎಂಬುವವರು ತಮ್ಮ ಸರಸ್ವತಿ ಅನುಗ್ರಹಿತ ವಾಕ್ಚಾತುರ್ಯದಿಂದ ನೆರೆದಿದ್ದ ಗ್ರಾಮಸ್ಥರಿಗೆ ಹಾಗೂ ಸಭಿಕರೆಲ್ಲರಿಗೂ ಮುಖ್ಯೋಪಾಧ್ಯಾಯರ ಹಾಗೂ ಸಹ ಶಿಕ್ಷಕಿ ರವರ ಸಾಧನೆಯ ಮತ್ತು ಅವರ ಸೇವೆಯ ಅವಲೋಕನವನ್ನು ಮಾಡುತ್ತಾ ಎಲ್ಲರಿಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಬಹಳಷ್ಟು ಮೌಲ್ಯ ಭರಿತ ಜ್ಞಾನವನ್ನು ಎಲ್ಲರಿಗೂ ಹಂಚಿದರು ಹಾಗೂ ಇದೇ ಸಂದರ್ಭದಲ್ಲಿ ನಾಗರೀಕರ ವೇದಿಕೆಯ ಅಧ್ಯಕ್ಷರಾದ ರೋಹನ್ ಗೌಡ ರವರು ಶಿಕ್ಷಕರ ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಗ್ರಾಮೀಣ ಪ್ರದೇಶದಲ್ಲಿ ರೈತರು ಜಾಗೃತರಾಗಿರಬೇಕು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ನಾಗರಿಕ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಧನಂಜಯ್ ರವರು, ಕಾರ್ಯದರ್ಶಿಗಳಾದ ರಮೇಶ್ ರವರು, ಖಜಾಂಚಿ ರವರಾದ ನಾಗೇಶ್ ರವರು, ಮಹಿಳಾ ಪ್ರಮುಖರಾದ ಗೀತಾ ರವರು, ಮಾರ್ಗದರ್ಶಿ ನಿರ್ದೇಶಕರಾದ ಕೃಷ್ಣೇಗೌಡರು, ಸಂಘದ ಸಂಯೋಜಕರಾದ ಗ್ರಾಮಭಾರತಿ ಕೃಷ್ಣಮೂರ್ತಿ ರವರು, ಸಂಘದ ಗೌರವ ಸದಸ್ಯರು ಉಪಸ್ಥಿತರಿದ್ದರು ಹಾಗೂ ಸಂಘದ ಎಲ್ಲರೂ ಕಾರ್ಯಕ್ರಮದ ಪ್ರಮುಖ ನಿಯೋಜಕರಾದ ಇದೇ ಗ್ರಾಮದ ಹಾಗೂ ನಮ್ಮ ನಾಗರಿಕರ ವೇದಿಕೆ ಸಂಘದ ಗೌರವ ಅಧ್ಯಕ್ಷರು ಆದ ಶ್ರೀ ವಿಮಲಾ ರವರೊಂದಿಗೆ ಸೇರಿ ಮುಖ್ಯೋಪಾಧ್ಯಾಯರನ್ನು ಹಾಗೂ ಸಹ ಶಿಕ್ಷಕಿ ರವರನ್ನು ಸನ್ಮಾನಿಸಿ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾತ್ರವಹಿಸಿದರು.